Advertisement
ಬೊಂದೇಲ್- ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುವ ಖಾಸಗಿ ಸಿಟಿ ಬಸ್‌ನಲ್ಲಿ 8ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗೆ ಪ್ರಯಾಣಿಸಿದ್ದು, ಆಕೆಗೆ ಬಸ್ ನಿರ್ವಾಹಕ ಮಂಜುನಾಥ್ ಟಿಕೆಟ್ ನೀಡುವಾಗ ಅದರಲ್ಲಿ ತನ್ನ ಮೊಬೈಲ್ ನಂಬರ್ ಬರೆದಿದ್ದನು. ಈ ವಿಷಯವನ್ನು ವಿದ್ಯಾರ್ಥಿನಿ ಮನೆಯಲ್ಲಿ ತಾಯಿಗೆ ತಿಳಿಸಿದ್ದಾಳೆ.
ಬಸ್ ನಿರ್ವಾಹಕನ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯ ಪೋಷಕರು ಮತ್ತು ಬಂಧುಗಳು ನಾಲ್ಕು ದಿನಗಳ ಹಿಂದೆ ಬೋಂದೆಲ್‌ನಲ್ಲಿ ಬಸ್‌ನ್ನು ತಡೆದು ನಿಲ್ಲಿಸಿ ನಿರ್ವಾಹಕನನ್ನು ಹೊರಗೆ ಕರೆದು ವಿಚಾರಿಸಿ ಬೈದದ್ದಲ್ಲದೆ, ವಿದ್ಯಾರ್ಥಿನಿಯ ತಾಯಿ ಥಳಿಸಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿನಿ ಕೇವಲ ಒಂದೇ ಬಾರಿ ಈ ಬಸ್‌ನಲ್ಲಿ ಪ್ರಯಾಣಿಸಿದ್ದು, ಆಗಲೇ ಆತ ನಂಬರ್ ಕೊಟ್ಟಿದ್ದ ಎನ್ನಲಾಗಿದೆ. ಆರೋಪಿಯನ್ನು ನಗರದ ಮಹಿಳಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
Related Articles
ನಿರ್ವಾಹಕ ಮಂಜುನಾಥ ಇಂತಹ ಕೃತ್ಯ ಎಸಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆ ಹೆಣ್ಣು ಮಕ್ಕಳ ಜತೆ ಇಂತಹ ವರ್ತನೆ ತೋರಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.
Advertisement