ಮಂಗಳೂರು: ತಂಡವೊಂದು ಹಲ್ಲೆ ನಡೆಸಿ ಚೂರಿ ತೋರಿಸಿ ಬೆದರಿಕೆ ಹಾಕಿದ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಬಬಿತಾ ಜಿ. ಶೆಟ್ಟಿ ಅವರ ಪತಿ ಗಣೇಶ್ ಶೆಟ್ಟಿ ಅವರು ರವಿವಾರ ರಾತ್ರಿ ಕೂಳೂರಿನ ಹೊಟೇಲೊಂದರ ಎದುರುಗಡೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಅವರ ಪರಿಚಯದ ಸುಧೀರ್ ಅವಾಚ್ಯವಾಗಿ ಬೈದು ಕೈಯಿಂದ ದೂಡಿದ್ದ. ಅನಂತರ 7-8 ಮಂದಿ ಗಣೇಶ್ ಶೆಟ್ಟಿ ಅವರನ್ನು ಎಳೆದುಕೊಂಡು ಹೋದಾಗ ಬಿಡಿಸಲು ಯತ್ನಿಸಿದ ಅವರ ಪತ್ನಿ ಬಬಿತಾ ಶೆಟ್ಟಿ ಅವರು ತಡೆಯಲು ಯತ್ನಿಸಿದ್ದರು. ಆಗ ಬಬಿತಾ ಶೆಟ್ಟಿ ಮತ್ತು ಅವರ ಕೆಲಸದಾಳು ಚಂದ್ರಹಾಸ್ ಮೇಲೆ ಕೂಡ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಬಬಿತಾ ಅವರ ಮೈಮೇಲೆ ಕೈ ಹಾಕಿ ದೂಡಿದ್ದಾರೆ.
ಗಣೇಶ್ ಶೆಟ್ಟಿ ಅವರಿಗೆ ಸುಧೀರ್ ಚೂರಿ ತೋರಿಸಿ ಜೀವಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.