ಮಂಗಳೂರು: ನಗರದ ಅತ್ತಾವರಕಟ್ಟೆಯ ಸಭಾ ಮಂಟಪದ ಬಳಿ ರವಿವಾರ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
Advertisement
ಅಪರಿಚಿತ ವ್ಯಕ್ತಿ ಸುಮಾರು 5.6 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಪೂರ ಶರೀರ, 2 ಇಂಚು ಉದ್ದದ ಬಿಳಿ ತಲೆಕೂದಲು ಹೊಂದಿದ್ದು ಬೂದು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ವಾರಸುದಾರರ ಬಗ್ಗೆ ಮಾಹಿತಿ ಇದ್ದರೆ ದಕ್ಷಿಣ ಪೊಲೀಸ್ ಠಾಣೆ (0824 - 2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.