Advertisement

ಮಂಗಳೂರು : ಉಡುಗೊರೆ ಆಮಿಷ ನೀಡಿ ವಿದ್ಯಾರ್ಥಿಗೆ 1.85 ಲ.ರೂ. ವಂಚನೆ

11:12 PM Jul 05, 2022 | Team Udayavani |

ಮಂಗಳೂರು : ಅಪರಿಚಿತನೋರ್ವ ವಿದ್ಯಾರ್ಥಿಗೆ ಉಡುಗೊರೆ ಕಳುಹಿಸುವುದಾಗಿ ಹೇಳಿ ಸೇವಾ ಶುಲ್ಕವಾಗಿ 1.85 ಲ. ರೂ. ಪಡೆದುಕೊಂಡು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ನಗರದ ಖಾಸಗಿ ಕಾಲೇಜಿನ ಫಿಸಿಯೋಥೆರಪಿ ವಿದ್ಯಾರ್ಥಿಗೆ ಅಪರಿಚಿತ ವ್ಯಕ್ತಿಯೋರ್ವ ಇನ್‌ಸ್ಟಾಗ್ರಾಂ ಮೂಲಕ ಡಾ| ಪ್ರಿನ್ಸ್‌ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು ಅನಂತರ ಆತನ ವಾಟ್ಸ್‌ಆ್ಯಪ್‌ ಸಂಖ್ಯೆ +447448065407 ಮೂಲಕ ಸಂಪರ್ಕದಲ್ಲಿದ್ದು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ.

ಅದಕ್ಕಾಗಿ ಸೇವಾ ಶುಲ್ಕ ಪಾವತಿಸುವಂತೆ ಹೇಳಿದ. ಅದನ್ನು ನಂಬಿದ ವಿದ್ಯಾರ್ಥಿ ಮೇ 3ರಿಂದ ಮೇ 5ರ ಅವಧಿಯಲ್ಲಿ ಹಂತ ಹಂತವಾಗಿ 1.85 ಲ.ರೂ.ಗಳನ್ನು ಗೂಗಲ್‌ ಪೇ ಮೂಲಕ 8414996450 ಮತ್ತು 7431984087 ಸಂಖ್ಯೆಗೆ ಪಾವತಿಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿ ಉಡುಗೊರೆ ನೀಡಿಲ್ಲ. ಈ ಬಗ್ಗೆ ಮಂಗಳೂರು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next