Advertisement

ಅಪಘಾತ ಎಸಗಿದ ಲಾರಿ ಚಾಲಕನಿಗೆ 6 ತಿಂಗಳು ಶಿಕ್ಷೆ ವಿಧಿಸಿದ ನ್ಯಾಯಾಲಯ

12:36 AM Sep 22, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪ ಪಡ್ರೆ ಬಳಿ 2014ರಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಪ್ರಕರಣದ ಆರೋಪಿ ಲಾರಿ ಚಾಲಕ ಪರಮೇಶ್ವರ ಅವರಿಗೆ ಮಂಗಳೂರು ನ್ಯಾಯಾಲಯವು 6 ತಿಂಗಳ ಕಾರಾಗೃಹ ಶಿಕ್ಷೆ, 7,500ರೂ.ದಂಡ, ತಪ್ಪಿದಲ್ಲಿ ಮತ್ತೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಅಂಜಲಿ ಶರ್ಮ ತೀರ್ಪು ನೀಡಿದ್ದಾರೆ.

Advertisement

2014ರ ಮೇ 12ರಂದು ಲಾರಿ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಸವಿತ ಶ್ರೀನಾಥ ಇವರ ಮಕ್ಕಳಾದ ನಿಸ್ಮಿತ, ಮನಿಷಾ,ರಿಕ್ಷಾ ಚಾಲಕ ಸುನೀಲ್‌ ಯಾನೇ ನವೀನ್‌ ಮೃತಪಟ್ಟಿದ್ದರು.

ಈ ಹಿಂದಿನ ಸಿಐ ನಟರಾಜ್‌ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ರೈ ವಾದಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next