Advertisement

ಮಂಗಳೂರು: ಮಾಂಗಲ್ಯ ಸರ ಸುಲಿಗೆ ; ಕದ್ದವರಿಬ್ಬರು, ಖರೀದಿಸಿದವರಿಬ್ಬರ ಬಂಧನ

06:32 PM Apr 25, 2022 | Team Udayavani |

ಮಂಗಳೂರು: ಏಪ್ರಿಲ್ 04 ರಂದು ಸಂಜೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗ ಗ್ರಾಮದ ಪಾಲನೆ ಎಂಬಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಏಪ್ರಿಲ್ 25 ರಂದು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಸಮೇತ ಬಂಧಿಸಲಾಗಿದೆ.

Advertisement

ಸರವನ್ನು ಸುಲಿಗೆ ಮಾಡಿದ ಆರೋಪಿಗಳಾದ ವಾಮಂಜೂರು ಅರೀಫ್ ( 26 ), ಬೊಂದೇಲ್ ನ ಮೊಹಮ್ಮದ್ ಹನೀಫ್ ( 36 ) ಎನ್ನುವವರನ್ನು ಬಂಧಿಸಿದ್ದಾರೆ.

ಅರೀಫ್ ವಿರುದ್ಧ ಈಗಾಗಲೇ ಮಂಗಳೂರು ಗ್ರಾಮಾಂತರ , ಕಂಕನಾಡಿ ನಗರ , ಕಾವೂರು , ಬಜಪೆ ಮೂಡಬಿದ್ರೆ , ಬಂಟ್ವಾಳ ಗ್ರಾಮಾಂತರ , ಬಂಟ್ವಾಳ ನಗರ ಪೊಲೀಸು ಠಾಣೆಗಳಲ್ಲಿ ಸುಲಿಗೆ , ಕೊಲೆ ಯತ್ನ , ಮನೆ ಕಳ್ಳತನ , ಸಾಮಾನ್ಯ ಕಳ್ಳತನದಂತಹ ಒಟ್ಟು 18 ಪ್ರಕರಣಗಳು ದಾಖಲಾಗಿ , ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಹನೀಫ್ ವಿರುದ್ಧ ಈಗಾಗಲೇ ಬಜಪೆ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತದೆ .

ಆರೋಪಿ ಮೊಹಮ್ಮದ್ ಹನೀಫ್ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲರೈ ಎಂಬಲ್ಲಿ ಪಾರ್ಕ್ ಮಾಡಿದ್ದ ಒಂದು ಆಕ್ಸಿಸ್ ಸ್ಕೂಟರ ನ್ನು ಕಳವು ಮಾಡಿ ಅದೇ ದ್ವಿಚಕ್ರವಾಹನವನ್ನು ಉಪಯೋಗಿಸಿ , ಕಾವೂರು ಪೊಲೀಸು ಠಾಣಾ ವ್ಯಾಪ್ತಿಯ ಬೊಲ್ದುಗುಡ್ಡೆ ಎಂಬಲ್ಲಿ  ಮಹಿಳೆಯ ಕತ್ತಿನಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದಾರಿ ಕೇಳುವ ನೆಪದಲ್ಲಿ ಸುಲಿಗೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಸುಲಿಗೆ ಮಾಡಿದ ಎರಡು ಮಾಂಗಲ್ಯ ಸರಗಳನ್ನು ಖರೀದಿಸಿದ ಕಾವೂರಿನ ನಕ್ಷತ್ರ ಜುವೆಲ್ಲರ್‌ನ ಮಾಲಿಕರಾದ ಅಬ್ದುಲ್ ಸಮದ್ ಪಿ.ಪಿ. ಮತ್ತು ಮೊಹಮ್ಮದ್ ರಿಯಾಝ್ ಎಂಬವರನ್ನು ವಶಕ್ಕೆ ಪಡೆದು  ಎರಡು ಪ್ರಕರಣಗಳಿಗೆ ಸಂಬಂಧಪಟ್ಟ ಒಟ್ಟು 18 ಗ್ರಾಮ್ ತೂಕದ 02 ಚಿನ್ನದ ಮಾಂಗಲ್ಯ ಸರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

Advertisement

ನಾಲ್ಕು ಆರೋಪಿಗಳಿಂದ ಸುಮಾರು 80 ಸಾವಿರ ರೂ ಮೌಲ್ಯದ , ಒಟ್ಟು 18 ಗ್ರಾಂ ತೂಕದ 2 ಚಿನ್ನದ ಮಾಂಗಲ್ಯ ಸರಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸುಮಾರು 50 ಸಾವಿರ ರೂ ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಲಾಗಿದ್ದು , ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next