ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹಳೆಯ ಟಿಕೆಟ್ ಬುಕಿಂಗ್ ಕಚೇರಿ (ಯುಟಿಎಸ್) ಯಲ್ಲಿದ್ದ ಎರಡು ಮೀಸಲುರಹಿತ ಟಿಕೆಟ್ ಬುಕಿಂಗ್ ಕೌಂಟರ್ ಮತ್ತೆ ಕಾರ್ಯಾರಂಭಿಸಿದೆ.
Advertisement
ಸೆಂಟ್ರಲ್ ರೈಲು ನಿಲ್ದಾಣದ ಸಮೀಪವೇ ಹೊಸ ಟಿಕೆಟಿಂಗ್ ಕಾಂಪ್ಲೆಕ್ಸ್ ಆರಂಭಿಸಿದ ಬಳಿಕ ಹಳೆಯ ಯುಟಿಎಸ್ ಕೌಂಟರ್‌ಗಳನ್ನು ಮುಚ್ಚಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿರುವ ಕೌಂಟರ್‌ಗಳಲ್ಲಿ ದಿನದ 24 ತಾಸು ಕಾರ್ಯವೆಸಗಲಿದೆ. ಹೊಸ ಟಿಕೆಟಿಂಗ್ ಕಾಂಪ್ಲೆಕ್ಸ್‌ನ ಒಂದು ಯುಟಿಎಸ್ ಬೆಳಗ್ಗೆ 10.30ರಿಂದ ಸಂಜೆ 6.30ರ ವರೆಗೆ ತೆರೆದಿರುವುದು. ಅಲ್ಲದೆ ಈ ಎರಡು ಕೌಂಟರ್‌ಗಳ ಜತೆಗೆ ಎರಡೂ ಕಡೆ ತಲಾ ಎರಡು ಸ್ವಯಂಚಾಲಿತ ಟಿಕೆಟ್ ಯಂತ್ರಗಳೂ ಇರಲಿವೆ.