Advertisement

Mangaluru CCB Police: 8 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ

08:56 PM Sep 12, 2024 | Team Udayavani |

ಮಂಗಳೂರು : ಮಹತ್ವದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಒಡಿಶಾದಿಂದ ಅಕ್ರಮವಾಗಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ 8 ಕೆಜಿ 650 ಗ್ರಾಂ ಗಾಂಜಾ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಗುರುವಾರ(ಸೆ12) ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಗಳು ಒಡಿಶಾದ ಗಜಪತಿ ಜಿಲ್ಲೆಯ ಬುಲುಬಿರೋ (24) ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ದಿಲ್ ದಾರ್ ಅಲಿ (28) ಎನ್ನುವವರಾಗಿದ್ದಾರೆ. ಗಾಂಜಾ ಮಾರಾಟ ಮತ್ತು ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿಯ ದೇವಿಪುರ ರಸ್ತೆಯ ತಚ್ಚಣಿ ಎಂಬಲ್ಲಿ ಆರೋಪಿಗಳನ್ನು ಮಾದಕ ವಸ್ತು ಸಹಿತ ಬಂಧಿಸಿದ್ದಾರೆ.

ಆರೋಪಿಗಳಿಂದ 2,60,000 ಮೌಲ್ಯದ 8.650 ಕೆಜಿ ಗಾಂಜಾ, ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತು ಮತ್ತು ಸೊತ್ತುಗಳ ಒಟ್ಟು ಮೌಲ್ಯ 3 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಒಡಿಶಾದಲ್ಲಿ ಗಾಂಜಾ ಖರೀದಿಸಿ ರೈಲಿನಲ್ಲಿ ಬೆಂಗಳೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಬಸ್‌ನಲ್ಲಿ ಬಂದಿದ್ದರು. ಮಂಗಳೂರು ಮತ್ತು ಮತ್ತು ಕೇರಳದಲ್ಲಿ ಜನರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿರುವುದು ಬಯಲಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.