ಮಂಗಳೂರು: ನಗರ ಅಪರಾಧ ಪತ್ತೆ ದಳಕ್ಕೆ (ಸಿಸಿಬಿ) ಹೊಸದಾಗಿ ಸೃಷ್ಟಿಸಲಾದ ಸಹಾಯಕ ಆಯುಕ್ತ (ಎಸಿಪಿ) ಹುದ್ದೆಗೆ ಕೇಂದ್ರ ಉಪವಿಭಾಗದಲ್ಲಿದ್ದ ಪರಮೇಶ್ವರ ಹೆಗಡೆ ಅವರನ್ನು ವರ್ಗಾವಣೆ ಮಾಡಲಾಗಿದೆ.
Advertisement
ಕೇಂದ್ರ ಉಪವಿಭಾಗಕ್ಕೆ ಪಣಂಬೂರು ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಕುಮಾರ್ ಎಸ್. ಅವರನ್ನು ವರ್ಗಾಯಿಸಲಾಗಿದೆ. ದಕ್ಷಿಣ ಉಪವಿಭಾಗದ ಎಸಿಪಿ ದಿನಕರ ಶೆಟ್ಟಿ ಅವರನ್ನು ಬೀದರ್ ಉಪವಿಭಾಗಕ್ಕೆ ವರ್ಗಾವಣೆಗೊಳಿಸಿ ಸರಕಾರ ಬುಧವಾರ ಆದೇಶ ಹೊರಡಿಸಿದೆ.