Advertisement

Mangaluru ಧರ್ಮ ಅವಹೇಳನ ಪ್ರಕರಣ; ಜೀವ ಬೆದರಿಕೆ ಕರೆ ಬಗ್ಗೆ ಮಹಿಳೆಯಿಂದ ದೂರು

12:05 PM Feb 20, 2024 | Team Udayavani |

ಮಂಗಳೂರು: ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಿಂದ ಧರ್ಮದ ಅವಹೇಳನ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೇಳಿಕೆ‌ ನೀಡಿದ್ದ ಮಹಿಳೆಯೊಬ್ಬರು ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಂಕನಾಡಿ‌ ನಗರ ಠಾಣೆಗೆ ದೂರು ನೀಡಿದ್ದಾರೆ.

Advertisement

ಕವಿತಾ ಎನ್ನುವವರ ದೂರು ನೀಡಿದ ಮಹಿಳೆ. ಅವರು ಮಗಳು ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. ಧರ್ಮದ ಅವಹೇಳನಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಜತೆ ಡಿಡಿಪಿಐ ಕಚೇರಿಗೆ ಭೇಟಿ ನೀಡಿದ್ದ ಅವರು ಶಿಕ್ಷಕಿಯ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದ್ದರು. ಈ‌ ವೇಳೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಇದೇ ವೇಳೆ ಅವರು ಕೆಲಸ ಮಾಡುತ್ತಿದ್ದ ತೊಕ್ಕೊಟ್ಟಿನ ಖಾಸಗಿ‌ ಶಾಲೆಯಿಂದ ಅವರನ್ನು ಕೆಲಸದಿಂದ ತೆಗೆದು‌ ಹಾಕಿದೆ‌ ಎಂದು ಕವಿತಾ ತಿಳಿಸಿದ್ದಾರೆ.

ಮೊಬೈಲ್‌ ಗೆ‌ ನಿರಂತರ ಬೆದರಿಕೆ‌ ಕರೆಗಳು ಬರುತ್ತಿದೆ. ರಾತ್ರಿ ವೇಳೆ ಕತಾರ್ ದೇಶದಿಂದಲೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಂಕನಾಡಿ ಠಾಣೆಗೆ  ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next