ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಎದುರು ಸೋಮವಾರ ರಾತ್ರಿ ಬೈಕ್‌ಗೆ ಕಾರು ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೋರ್ವರು ಮೃತಪಟ್ಟಿದ್ದಾರೆ.
ಸಾವ್ಯೊ ಮಹೇಶ್ (20) ಮೃತಪಟ್ಟವರು.
ಇವರು ಇನ್ನೋರ್ವ ವಿದ್ಯಾರ್ಥಿ ಪ್ರಣಮ್ ಶೆಟ್ಟಿ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಮಹೇಶ್ ಮೃತಪಟ್ಟು ಪ್ರಣಮ್ ಗಾಯಗೊಂಡಿದ್ದಾರೆ. ಇವರು ಟ್ಯೂಷನ್ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದರು. ಕಾಲೇಜು ಎದುರಿನ ಡಿವೈಡರ್ ಬಳಿ ಯು ಟರ್ನ್ ಪಡೆದು ಮುಂದಕ್ಕೆ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ. ಮಹೇಶ್ ಸಹ್ಯಾದ್ರಿ ಕಾಲೇಜಿನ ರೊಬೊಟಿಕ್ ವಿಭಾಗದ ವಿದ್ಯಾರ್ಥಿಯಾಗಿದ್ದು ಬೆಳ್ತಂಗಡಿಯ ನಿವಾಸಿಯಾಗಿದ್ದರು.
ಅಪಾಯಕಾರಿ ಕ್ರಾಸಿಂಗ್
ಕಾಲೇಜು ಎದುರಿನ ಈ ಕ್ರಾಸಿಂಗ್ ಅಪಾಯಕಾರಿಯಾಗಿದ್ದು ಈಗಾಗಲೇ ಇಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ.