Advertisement

Mangaluru; ಡ್ರಗ್ಸ್‌ ಮಾರಾಟ ಯತ್ನ: ಇಬ್ಬರ ಬಂಧನ

07:20 PM Feb 09, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೋಂದೆಲ್‌ ಮೈದಾನದಲ್ಲಿ ಮಂಗಳೂರು ಉತ್ತರ ವಿಭಾಗದ ಡ್ರಗ್ಸ್‌ ತಡೆ ದಳದವರು ಬಂಧಿಸಿದ್ದಾರೆ.

Advertisement

ಮಂಗಳೂರಿನ ಹಿಮನೀಶ್‌(26) ಮತ್ತು ಕೋಟೆಕಾರ್‌ನ ಪವನ್‌ರಾಜ್‌ ಪಿ.(28) ಬಂಧಿತ ಆರೋಪಿಗಳು. ಆರೋಪಿಗಳು ಬೈಕ್‌ನಲ್ಲಿ ಪ್ರಾಸ್ಟಿಕ್‌ ಕವರ್‌ಗಳಲ್ಲಿಟ್ಟು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಆರೋಪಿಗಳಿಂದ 19 ಗ್ರಾಂ ತೂಕದ ಸುಮಾರು 57,000 ರೂ. ಮೌಲ್ಯದ ಮೆಥಪಟೈನ್‌ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next