Advertisement

Mangaluru: ಪೊಲೀಸರಿಂದ ಮತ್ತೂಂದು ಪ್ರಯೋಗ; ಸಾರ್ವಜನಿಕರ ಪರದಾಟ

04:24 PM Sep 03, 2024 | Team Udayavani |

ಸ್ಟೇಟ್‌ಬ್ಯಾಂಕ್‌: ನಗರದ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಕುದು¾ಲ್‌ ರಂಗರಾವ್‌ ಪುರಭ ವನದವರೆಗೆ (ಲೇಡಿಗೋಶನ್‌ ಆಸ್ಪತ್ರೆಯ ಆಸುಪಾಸು) ಬಸ್‌ಗಳ ನಿಲುಗಡೆ ನಿಷೇಧಿ ಸುವ ಮೂಲಕ ಮಂಗ ಳೂರು ಪೊಲೀಸರು ನಗರದಲ್ಲಿ ಮತ್ತೂಂದು ಸಂಚಾರ ಬದಲಾ ವಣೆಯ ಪ್ರಯೋಗ ಆರಂಭಿಸಿದ್ದಾರೆ.

Advertisement

ಬಸ್‌ ನಿಲ್ದಾಣದಿಂದ ಹಂಪನಕಟ್ಟೆ ಕಡೆಗೆ ಹೋಗುವ ಎಲ್ಲ ಬಸ್‌ಗಳು ರಸ್ತೆಯ ಬಲಬದಿಯಲ್ಲಿಯೇ ಸಂಚರಿಸಲು, ಇತರ ವಾಹನಗಳು ರಸ್ತೆಯ ಎಡಬದಿಯಲ್ಲಿಯೇ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ರಸ್ತೆಗೆ ಬ್ಯಾರಿಕೇಡ್‌ ಅಳವಡಿಸಿ ವಿಭಾಗಿಸಲಾಗಿದೆ. ಈ ಸ್ಥಳದಲ್ಲಿ ಪ್ರಯಾ ಣಿಕರು ಬಸ್‌ ಹತ್ತುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.

ಯಾಕಾಗಿ ಈ ಬದಲಾವಣೆ?
ವಾಹನಗಳ ಸುಗಮ ಸಂಚಾರವೇ ಈ ಬದಲಾವಣೆಯ ಉದ್ದೇಶ ಎನ್ನುತ್ತಿದ್ದಾರೆ ಪೊಲೀಸರು.

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದ ಎದುರಿನ ರಸ್ತೆ (ರಾವ್‌ ಆ್ಯಂಡ್‌ ರಾವ್‌ ರಸ್ತೆ) ಯಿಂದ ಕ್ಲಾಕ್‌ಟವರ್‌ವರೆಗೆ ಏಕಮುಖ ರಸ್ತೆ. ಇಲ್ಲಿ (ಲೇಡಿಗೋಶನ್‌ ಆಸ್ಪತ್ರೆ ಬಳಿ) ಬಸ್‌ಗಳು ಅಲ್ಲಲ್ಲಿ ನಿಲುಗಡೆಯಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿತ್ತು. ಇದನ್ನು ಪರಿಹರಿಸುವ ಉದ್ದೇಶದಿಂದ ಕೆಲವು ತಿಂಗಳುಗಳ ಹಿಂದೆ ಲೇಡಿಗೋಶನ್‌ ಬಳಿ ಬಸ್‌ಗಳು ಮತ್ತು ಇತರ ವಾಹನಗಳು ರಸ್ತೆಯ ಪ್ರತ್ಯೇಕ ಭಾಗದಲ್ಲಿ ಸಂಚರಿಸುವುದಕ್ಕಾಗಿ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಅದರಂತೆ ಬಸ್‌ಗಳು ರಸ್ತೆಯ ಎಡಭಾಗದಲ್ಲಿ ಸಂಚರಿಸಲು ಅವಕಾಶವಿತ್ತು. ಇತರ ವಾಹನಗಳು ಬಲಬದಿಯಲ್ಲಿ ಸಂಚರಿಸಬಹುದಾಗಿತ್ತು. ಇದೀಗ ಆ ವ್ಯವಸ್ಥೆಯನ್ನು ಪೂರ್ಣವಾಗಿ ಬದಲಾಯಿಸಲಾಗಿದೆ. ಬಸ್‌ಗಳು ರಸ್ತೆಯ ಬಲಬದಿಯಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಬಸ್‌ ನಿಲ್ದಾಣ ಪ್ರವೇಶ ನಿರ್ಬಂಧ
ಬಸ್‌ಗಳು ಸ್ಟೇಟ್‌ಬ್ಯಾಂಕ್‌ ನಿಲ್ದಾಣದಿಂದ ನಿರ್ಗಮಿಸುವ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇದರಿಂದಾಗಿ ಬಸ್‌ಗಳು ಮಾತ್ರ ಆ ಭಾಗದಲ್ಲಿ ಸಂಚರಿಸಬಹುದಾಗಿದೆ. ಇತರ ವಾಹನಗಳು ಆ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಮಾತ್ರವಲ್ಲದೆ, ಬಸ್‌ ನಿಲ್ದಾಣದ ಬಳಿ ಹೋಗುವುದಕ್ಕೂ ಅವಕಾಶ ನೀಡಿಲ್ಲ.

Advertisement

ಸುಗಮ ಸಂಚಾರಕ್ಕಾಗಿ ಬದಲಾವಣೆ
ಬಸ್‌ಗಳು ಸಹಿತ ಎಲ್ಲ ವಾಹನಗಳ ಸುಗಮ ಸಂಚಾರಕ್ಕಾಗಿ ಈ ರೀತಿಯ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಸಿಟಿ ಬಸ್‌ಗಳಿಗೆ ಲೇಡಿಗೋಶನ್‌ ಬಳಿ ನಿಲುಗಡೆಗೆ ಅವಕಾಶವಿತ್ತು. ಆದರೆ ಎಕ್ಸ್‌ಪ್ರೆಸ್‌ ಬಸ್‌ಗಳು ಕೂಡ ನಿಲುಗಡೆಯಾಗಿ ಸಂಚಾರ ಸ್ಥಗಿತವಾಗುತ್ತಿತ್ತು. ಇದೀಗ ಎಲ್ಲ ಬಸ್‌ಗಳು ಒಂದೇ ಲೇನ್‌ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್‌ ನಿಲ್ದಾಣದೊಳಗೆ ಬಂದು ಸುರಕ್ಷಿತವಾಗಿ ಬಸ್‌ ಹತ್ತಬಹುದು. ಇಲ್ಲವಾದರೆ ಹಂಪನಕಟ್ಟೆ(ಕೆ.ಬಿ.ಕಟ್ಟೆ)ಯಲ್ಲಿ ಬಸ್‌ ಹತ್ತಬಹುದು. ಆಟೋರಿಕ್ಷಾಗಳು ಬಸ್‌ ನಿಲ್ದಾಣದ ನಿರ್ಗಮನ ದ್ವಾರದವರೆಗೆ ಬರಲು ಅವಕಾಶವಿದೆ. ಸಾರ್ವಜನಿಕರು, ವಾಹನ ಚಾಲಕರ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ.
-ದಿನೇಶ್‌ ಕುಮಾರ್‌ ಬಿ.ಪಿ. ಡಿಸಿಪಿ, ಸಂಚಾರ ಮತ್ತು ಅಪರಾಧ ವಿಭಾಗ

ಬಸ್‌ ಹತ್ತಲು ಪರದಾಟ
ಬಸ್‌ಗಳು ಬಲಬದಿಯಲ್ಲೇ ಹೋಗ ಬೇಕು. ಹಂಪನಕಟ್ಟೆಯವರೆಗೆ ನಿಲ್ಲಿಸಬಾರದು ಎಂಬ ಸೂಚನೆಯನ್ನು ಪೊಲೀಸರು ನೀಡಿದ್ದಾರೆ. ಅದರಂತೆ ಬಸ್‌ಗಳು ಬಲಬದಿಯಲ್ಲಿಯೇ ಸಂಚರಿಸುತ್ತಿವೆ. ಆದರೆ ಲೇಡಿಗೋಶನ್‌ ಬಳಿ ಇರುವ ಬಸ್‌ ನಿಲ್ದಾಣದ ಕಡೆಯಿಂದ ಪ್ರಯಾಣಿಕರು ರಸ್ತೆಯ ಒಂದು ಬದಿಯನ್ನು ಅಪಾಯಕಾರಿಯಾಗಿ ದಾಟಿ ಬಲಬದಿಗೆ ಓಡಿ ಬಂದು ಬಸ್‌ ಹತ್ತುತ್ತಿದ್ದಾರೆ. ಇದು ಅಪಾಯವನ್ನು ಆಹ್ವಾನಿಸುತ್ತಿದೆ. ಎಡಬದಿಯಲ್ಲಿ ಸಾಗುವ ವಾಹನಗಳ ನಡುವೆ ರಸ್ತೆ ದಾಟುವುದರಿಂದ ಅಪಘಾತದ ಭೀತಿಯೂ ಇದೆ. ಅವಸರವಾಗಿ ಬಸ್‌ ಹತ್ತುವ ಅನಿವಾರ್ಯ ಉಂಟಾಗಿದೆ.
ಬಸ್‌ನಿಲ್ದಾಣ, ಹಂಪನಕಟ್ಟೆಯಲ್ಲಿ ಮಾತ್ರ ನಿಲುಗಡೆ

ಸ್ಟೇಟ್‌ಬ್ಯಾಂಕ್‌ನ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಬಸ್‌ ಗಳು ಅನಂತರ ನೇರವಾಗಿ ಹಂಪನ ಕಟ್ಟೆಯಲ್ಲಿಯೇ ನಿಲುಗಡೆ ಯಾಗಬೇಕು. ಆ ಎರಡು ಸ್ಥಳಗಳ ನಡುವೆ ಎಲ್ಲಿಯೂ ಬಸ್‌ ನಿಲುಗಡೆ ಮಾಡಬಾರದು ಎನ್ನುವುದು ಪೊಲೀಸರ ಸೂಚನೆ.

ಆಟೋರಿಕ್ಷಾ ಚಾಲಕರ ಅಸಮಾಧಾನ
ಸಂಚಾರ ಬದಲಾವಣೆಗೆ ಆಟೋ ರಿಕ್ಷಾ ಚಾಲಕರು ಕೂಡ ಸಂಚಾರ ಪೊಲೀಸರೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾರಿಕೇಡ್‌ ಹಾಕಿರುವುದರಿಂದ ಬಸ್‌ ನಿಲ್ದಾಣದ ಬಳಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಲಗೇಜ್‌ನ್ನು ನಾವೇ ಬಸ್‌ ನಿಲ್ದಾಣದವರೆಗೆ ಹೊತ್ತು ಕೊಂಡು ಹೋಗಬೇಕಾಗಿದೆ. ಅನಾರೋಗ್ಯ ಪೀಡಿತರಾದ ಪ್ರಯಾಣಿಕರು ಬಸ್‌ ನಿಲ್ದಾಣದೊಳಗೆ ತೆರಳುವುದಕ್ಕೂ ಸಮಸ್ಯೆಯಾಗಿದೆ ಎಂದು ಆಟೋರಿಕ್ಷಾ ಚಾಲಕರು ದೂರಿದ್ದಾರೆ. ಆಟೋರಿಕ್ಷಾ ಚಾಲಕರು ಈ ಬಗ್ಗೆ ಸೋಮವಾರ ಬೆಳಗ್ಗೆ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next