Advertisement

ಮಂಗಳೂರು ವಿಮಾನ ನಿಲ್ದಾಣ: 23 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನ ವಶ

10:19 PM Sep 28, 2022 | Team Udayavani |

ಮಂಗಳೂರು: ದುಬೈನಿಂದ ಇಲ್ಲಿಗೆ ಬಂದಿಳಿದ ಪ್ರಯಾಣಿಕರೊಬ್ಬರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಕಸ್ಟಮ್ಸ್ ಅಧಿಕಾರಿಗಳು 461 ಗ್ರಾಂ ಚಿನ್ನವನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ, ಇದರ ಮೌಲ್ಯ 23,09,610 ರೂ.ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ತಿರುವನಂತಪುರಂ ಮೂಲದ ಪುರುಷ ಪ್ರಯಾಣಿಕರನ್ನು ಅಧಿಕಾರಿಗಳು ತಡೆದು. ಮಿಕ್ಸರ್ ಗ್ರೈಂಡರ್‌ನ ಮೋಟರ್‌ನಲ್ಲಿ ಕಂದು ಬಣ್ಣದ ಲೇಪಿತ ಎಣ್ಣೆಯ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಕಸ್ಟಮ್ಸ್ ಪ್ರಕಟಣೆ ಬುಧವಾರ ತಿಳಿಸಿದ್ದಾರೆ.

ಬಿಸಿಮಾಡಿದ ಮತ್ತು ಲೇಪನವನ್ನು ತೆಗೆದ ನಂತರ, ಚಿನ್ನವು 461 ಗ್ರಾಂ ತೂಕದ 24 ಕ್ಯಾರೆಟ್ ಗಳ ಆಯತಾಕಾರದ ಬಾರ್ ಆಗಿ ರೂಪುಗೊಂಡಿತು. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next