Advertisement

ಮಂಗಳೂರು ವಿಮಾನ ನಿಲ್ದಾಣ: 1.617 ಕೆ.ಜಿ. ಚಿನ್ನ ಸಹಿತ 96.76 ಲ.ರೂ. ಮೌಲ್ಯದ ಸೊತ್ತುಗಳ ವಶ

11:42 PM Feb 04, 2023 | Team Udayavani |

ಮಂಗಳೂರು: ದುಬಾೖಯಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಈ ವರ್ಷದ ಜ.19ರಿಂದ ಜ.31ರ ಅವಧಿಯಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ 1.617 ಕೆ.ಜಿ. ಚಿನ್ನ ಸಹಿತ ಒಟ್ಟು 96.76 ಲ.ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5 ಮಂದಿ ಮಹಿಳಾ ಪ್ರಯಾ ಣಿಕರು ದುಬಾೖಯಿಂದ ಟ್ರಾಲಿಬ್ಯಾಗ್‌ನ ಬೀಡಿಂಗ್‌ ಭಾಗ, ಗುದನಾಳ, ಬಟ್ಟೆಯ ಬಟನ್‌ ಮೊದಲಾದೆಡೆ ಇಟ್ಟುಕೊಂಡು ಸಾಗಿಸಲು ಯತ್ನಿಸುತ್ತಿದ್ದ 90,34,970 ರೂ. ಮೌಲ್ಯದ ಚಿನ್ನ ಹಾಗೂ ಓರ್ವ ಪ್ರಯಾಣಿಕ ದುಬಾೖಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 6,42,740 ರೂ. ಮೌಲ್ಯದ ಸಿಗರೇಟ್‌ ಮತ್ತು ಇ-ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next