Advertisement

ಮಂಗಳೂರು ಮೂಲದ ಅನಿತಾ ಪೈ ಯೆಸ್‌ ಬ್ಯಾಂಕಿನ ಸಿಒಒ ಆಗಿ ನೇಮಕ

10:27 AM Oct 12, 2019 | mahesh |

ಮಂಗಳೂರು: ಖಾಸಗಿ ವಲಯದ ಮುಂಚೂಣಿ ಬ್ಯಾಂಕ್‌ ಆಗಿರುವ ಯೆಸ್‌ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಮಂಗಳೂರು ಮೂಲದ ಅನಿತಾ ಪೈ ಅವರು ನೇಮಕಗೊಂಡಿದ್ದಾರೆ.

Advertisement

ಬ್ಯಾಂಕಿಂಗ್‌ ಮತ್ತು ವಿತ್ತೀಯ ಕ್ಷೇತ್ರದಲ್ಲಿ ಸುದೀರ್ಘ‌ 29 ವರ್ಷಗಳ ಅನುಭವ ಹೊಂದಿರುವ ಅವರು ಈ ಹಿಂದೆ ರೀಟೇಲ್‌ ಮತ್ತು ಕಾರ್ಪೊರೆಟ್‌ ನಿರ್ವಹಣೆ, ಎಟಿಎಂ ಮತ್ತು ಬ್ರ್ಯಾ ಂಚ್‌ ಬ್ಯಾಂಕಿಂಗ್‌ ಸೇವೆ, ಗ್ರಾಹಕ ಸೇವೆ ಮತ್ತು ಸೇವಾ ಗುಣಮಟ್ಟ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿಒಒ ಆಗಿ ಅವರು ಬ್ಯಾಂಕಿನ ಒಟ್ಟು ನಿರ್ವಹಣೆ ಮತ್ತು ಸೇವೆಯ ಒದಗಣೆ ಮತ್ತು ಮಾಹಿತಿ ತಂತ್ರಜ್ಞಾನದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಅನಿತಾ ಅವರು ಮುಂಬಯಿನಲ್ಲಿ ಹುಟ್ಟಿ ಬೆಳೆದಿದ್ದು, ಅಲ್ಲಿಯೇ ಶಿಕ್ಷಣ ಪಡೆದಿದ್ದರು. ಅವರ ತಂದೆ ಮತ್ತು ತಾಯಿ ಮಂಗಳೂರಿನವರು. ಯೆಸ್‌ ಬ್ಯಾಂಕಿಗೆ ಖಾಸಗಿ ರಂಗದ ಮುಂಚೂಣಿಯ ಬ್ಯಾಂಕ್‌ಗಳಲ್ಲಿ 4ನೇ ಸ್ಥಾನವಿದ್ದು, ಅಂತಹ ಬ್ಯಾಂಕ್‌ನ ಉನ್ನತ ಹುದ್ದೆಗೆ ಮಂಗಳೂರು ಮೂಲದವರಾಗಿ, ಮಹಿಳೆಯೊಬ್ಬರು ನೇಮಕಗೊಂಡಿರುವುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next