Advertisement

TTD : ತಿರುಪತಿ ದೇಗುಲದಲ್ಲಿ ಇನ್ನು ಮಂಗಳಸೂತ್ರ ಮಾರಾಟ!

02:08 AM Feb 01, 2024 | Team Udayavani |

ತಿರುಪತಿ: ಮದುವೆಗೆ ಮಂಗಳಸೂತ್ರ ಬೇಕಾದರೆ ನೇರ ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಾನದಿಂದಲೇ ಖರೀದಿಗೆ ಅವಕಾಶ ಸಿಗಲಿದೆ. ದೇಗುಲದ ಆಡಳಿತ ಮಂಡಳಿ, ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಈ ಹೊಸ ಯೋಚನೆಯನ್ನು ಹೊಂದಿದೆ. ಈ ಮೂಲಕ ಸನಾತನ ಹಿಂದೂ ಧರ್ಮದ ಪ್ರಚಾರಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹೇಳಿದ್ದಾರೆ.

Advertisement

ತಿರುಪತಿ ವೆಂಕಟೇಶ್ವರ ಸನ್ನಿಧಿಯಿಂದಲೇ ಮಂಗಳಸೂತ್ರ ಖರೀದಿಸಿ ಸಂತೃಪ್ತ ವೈವಾಹಿಕ ಜೀವನ ಹೊಂದುವ ನಿಟ್ಟಿನಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗಿದೆ. 4 ರಿಂದ 5 ವಿನ್ಯಾಸಗಳಲ್ಲಿ ಅವುಗಳನ್ನು ತಯಾರಿಸಲಾಗುತ್ತದೆ. ಅದಕ್ಕಾಗಿ 5 ರಿಂದ 10 ಗ್ರಾಂ ಚಿನ್ನವನ್ನೂ ಬಳಕೆ ಮಾಡಲಾಗುತ್ತದೆ ಎಂದು ಕರುಣಾಕರ ರೆಡ್ಡಿ ತಿಳಿಸಿದ್ದಾರೆ.

ಬಜೆಟ್‌ಗೆ ಸಮ್ಮತಿ: ಇದರ ಜತೆಗೆ ಟಿಟಿಡಿಯ ವಾರ್ಷಿಕ ಬಜೆಟ್‌ಗೆ ಕೂಡ ಆಡಳಿತ ಮಂಡಳಿ ಸಮ್ಮತಿ ನೀಡಿದ್ದು, 2024-25ನೇ ಸಾಲಿನಲ್ಲಿ ಹುಂಡಿ ಕಾಣಿಕೆಗಳ ಮೂಲಕ 1611 ಕೋಟಿ ರೂ. ಸಂಗ್ರಹ ಆಗಲಿದೆ ಎಂದು ನಿರೀಕ್ಷಿಸಿದೆ. ಶ್ರೀವಾರಿ ಹುಂಡಿಯಲ್ಲಿ ಪ್ರತಿ ದಿನ ಸರಾಸರಿ ನಗದು ಮೂಲಕ 4.5 ಕೋಟಿ ರೂ.ಗಳಿಂದ 5 ಕೋಟಿ ರೂ. ವರೆಗೆ ಸಂಗ್ರಹದ ನಿರೀಕ್ಷೆಯನ್ನು ಆಡಳಿತ ಮಂಡಳಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next