Advertisement
ಹಿಂದೆಲ್ಲ ಕರಿಮಣಿ ಎಂದರೆ ಕೊರಳಲ್ಲಿ ಸ್ಥಾನ ಪಡೆದಿತ್ತು ಆದರೆ ಇಂದು ಕಾಲ ಬದಲಾಗಿದೆ ಬದುಕಿನ ನೂತನ ಅರ್ಥ ದೊರಕಿಸುವ ಮಂಗಲ ಸೂತ್ರವು ಕೈಗೆ ಮೆರಗು ನೀಡುವ ನಿಟ್ಟಿನಲ್ಲಿ ಸಹ ಉಪಯೋಗಿಸುತ್ತಿದ್ದಾರೆ. ಕರಮಣಿ ಸರದ ಕುರಿತು ಪರವಿರೋಧಗಳು ಆಗಾಗ ಕೇಳಿ ಬರುತ್ತಿದ್ದು ಆಧುನಿಕತೆಯ ಮಂಪರಿನ ನಡುವೆ ಕರಿಮಣಿಯೆಂದರೆ ವಿನೂತನ ರೂಪ ಪಡೆದ ಬ್ರಾಸ್ಲೈಟ್ ಫ್ಯಾಷನ್ ಪ್ರಿಯರ ಮನಗೆದ್ದಿದೆ ಎನ್ನಬಹುದು.
ಕರಿಮಣಿ ಬಳೆ ಸ್ವಲ್ಪ ಹಳೆಯ ಫ್ಯಾಷನ್ ಆಗಿದ್ದು ಕರಿಮಣಿಯನ್ನು ಬಳೆಯ ನಡುವೆ ಇರಿಸಿ ಸಿದ್ಧಗೊಳಿಸುತ್ತಿದ್ದರು. ಹುಟ್ಟಿದ ಮಗುವಿನ ಪುಟ್ಟ ಕೈಗಳಿಗೆ ದೃಷ್ಟಿತಾಕದಂತೆ ಕರಿಮಣಿ ಬಳೆಯನ್ನು ಬಳಸುತ್ತಿದ್ದರು. ಸಾಮಾನ್ಯವಾಗಿ ಮೊದ ಮೊದಲು ಚಿನ್ನದಲ್ಲಿ ಈ ಫ್ಯಾಷನ್ ಪರಿಚಯಿಸಲ್ಪಟ್ಟು ಸಮಾಜದ ಶ್ರೀಮಂತವರ್ಗದ ಮಹಿಳೆಯರು ಮಾತ್ರ ಧರಿಸುತ್ತಿದ್ದ ಕಾರಣ ಮೊದಲು ಅಷ್ಟಾಗಿ ಜನಪ್ರಿಯವಾಗಿರಲಿಲ್ಲ. ಇದನ್ನೂ ಓದಿ: ಜೀವಯಾನ: ಭಾವನೆಗಳನ್ನು ಅರ್ಥಮಾಡಿಕೊಂಡರೆ ಬದುಕು ಬಲು ಸುಂದರ
Related Articles
Advertisement
ಕರಿಮಣಿ ಬ್ರಾಸ್ಲೈಟ್ಬಾಲಿವುಡ್ನ ಸ್ಟಾರ್ ನಟಿಯರಾದ ಶಿಲ್ಪಾ ಶೆಟ್ಟಿ, ಸೋನಮ್ ಕಪೂರ್ ಈ ಕರಿಮಣಿಯ ಬ್ರಾಸ್ಲೈಟ್ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಮಟ್ಟಿಗೆ ಸದ್ದಾಗಿದ್ದರೂ. ಆ ಬಳಿಕ ಫ್ಯಾಷನ್ ನೆಲೆಯಲ್ಲಿ ಇಂದು ಎಲ್ಲೆಡೆ ಈ ರೀತಿ ಬ್ರಾಸ್ಲೈಟ್ ಬಳಕೆ ಮಾಡುತ್ತಿದ್ದು ಕೆಲವರು ಕತ್ತಿಗೆ ಕರಿಮಣಿ ಹಾಕುವ ಪರ್ಯಾಯವಾಗಿ ಬ್ರಾಸ್ಲೈಟ್ ಮಾಡಿ ಧರಿಸುತ್ತಿದ್ದರೆ ಇನ್ನೂ ಕೆಲವರು ಕತ್ತು ಮತ್ತು ಕೈ ಎರಡಕ್ಕೂ ಪ್ರತ್ಯೇಕವೆಂಬಂತೆ ಆಯ್ಕೆ ಮಾಡಲಾಗಿರುವುದನ್ನು ಕಾಣಬಹುದು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕನ್ನಡಿಗರ ಒಡೆತನದ ಕ್ಯಾಸಿನೋ? ಡಿಸೈನ್ ಹೇಗೆ:
ಚಿನ್ನದ ಈ ಮಾದರಿಯ ಬ್ರಾಸ್ಲೈಟ್ ವಿನ್ಯಾಸದಲ್ಲಿ ಚಿನ್ನದ ಮಣಿ ಮತ್ತು ಕರಿಮಣಿಯನ್ನು ಮಿಶ್ರವಾಗಿಸಿ ಅಲಲ್ಲಿ ಸರವನ್ನು ಮತ್ತು ವಿವಿಧ ಬಣ್ಣದ ಹರಳನ್ನು ಸಹ ಬಳಸಿ ಮಾಡುತ್ತಾರೆ. ವಿನ್ಯಾಸ ಮಾಡುವಾಗ ಕರಿಮಣಿ, ಕ್ರಿಸ್ಟಲ್ ಮಣಿ, ಹರಳಿನಿಂದ ತಯಾರಿಸಿದ ನಕ್ಷತ್ರ, ಹೃದಯ, ವಿವಿಧ ಆಕೃತಿಯ ಚಿಕ್ಕ ಚಿಕ್ಕ ಪೆಂಡೆಂಟ್ ಬಳಸಲಾಗುತ್ತದೆ. ಯಾವ ಡ್ರೇಸ್‌ಗೆ ಸೂಕ್ತ:
ದಿನನಿತ್ಯ ಬಳಕೆಗೂ ಈ ರೀತಿ ಬ್ರಾಸ್ಲೈಟ್ಉತ್ತಮವಾಗಿದ್ದರೂ ಆಯ್ಕೆ ಮಾಡುವಾಗ ಹರಳು ರಹಿತ ಕರಿಮಣಿ ಬ್ರಾಸೈಟ್ ಖರೀದಿಸುವುದು ಉತ್ತಮ. ಜೀನ್ಸ್, ಕುರ್ತಿ, ಸೀರೆ ಬಹುತೇಕ ಎಲ್ಲಾ ಬಟ್ಟೆಗೂ ಈ ಬ್ರಾಸ್ಲೈಟ್ ತೊಡಬಹುದಾಗಿದೆ. ಒಟ್ಟಾರೆ ಸಂಪ್ರದಾಯಕ್ಕೂ ಸೈ ಎನ್ನುವ ಫ್ಯಾಷನ್ ಪರಿಚಯಿಸಿದ್ದು ಮೆಚ್ಚುವ ಸಂಗತಿಯಾಗಿದೆ. *ರಾಧಿಕಾ ಕುಂದಾಪುರ