Advertisement

ತಾಯಿ ಮೃತಪಟ್ಟಾಗಲೂ ಆತ ಬರಲಿಲ್ಲ, ಪೊಲೀಸರಿಗೆ ಸಹಕಾರ ನೀಡುತ್ತೇವೆ: ಆದಿತ್ಯ ರಾವ್ ಸಹೋದರ

09:28 AM Jan 23, 2020 | keerthan |

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕವನ್ನಿಟ್ಟಿದ್ದ ಶಂಕಿತ ಆರೋಪಿ ಆದಿತ್ಯ ರಾವ್ ಬೆಂಗಳೂರು ಪೊಲೀಸರ ಮುಂದೆ ಶರಣಾಗಿದ್ದು, ಹೆಚ್ಚಿನ ವಿಚಾರಣೆಗೆ ಮಂಗಳೂರಿಗೆ ಕರೆದುಕೊಂಡು ಬರುವ ಸಾಧ್ಯತೆಯಿದೆ.

Advertisement

ಎಸಿಪಿ ಬೆಳ್ಳಿಯಪ್ಪ, ವಿನಯ್ ಗಾಂವ್ಕರ್ ನೇತೃತ್ವದ ಐದು ಅಧಿಕಾರಿಗಳ ತನಿಖಾ ತಂಡ ವಿಮಾನದ ಮೂಲಕ ಬೆಂಗಳೂರಿಗೆ ತಲುಪಿದೆ. ಮಂಗಳೂರು ಪೊಲೀಸರಿಗೆ ಸಂಬಂಧಿಸಿದ ಪ್ರಕರಣವಾಗಿರುವ ಕಾರಣ ಬೆಂಗಳೂರು ಪೊಲೀಸರು ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

ಆರೋಪಿ ಆದಿತ್ಯ ರಾವ್ ಅವರ ಕುಟುಂಬಿಕರು ಮಂಗಳೂರಿನ ಚಿಲಿಂಬಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದಾರೆ.. ಆ ಮನೆಯಲ್ಲಿ ಸದ್ಯ ಆದಿತ್ಯ ರಾವ್ ತಂದೆ ಮತ್ತು ಸಹೋದರ ಇದ್ದಾರೆ ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ರಾವ್ ಸಹೋದರ, ಕಳೆದ ಮೂರು ವರ್ಷಗಳಿಂದ ನಮಗೆ ಆತನ ಸಂಪರ್ಕವಿಲ್ಲ. ಕಳೆದ ಸಲ ಜೈಲಿಗೆ ಹೋದಾಗಲೂ ನಾವು ಯಾವುದೇ ರೀತಿಯ ಸಂಪರ್ಕ ಮಾಡಿರಲಿಲ್ಲ. ಕಳೆದ ವರ್ಷ ತಾಯಿ ತೀರಿಕೊಂಡಾಗ ಜೈಲಿಗೆ ಕರೆಮಾಡಿ ವಿಷಯ ತಿಳಿಸಿದ್ದೆವು. ಆದರೆ ಆತ ಬರಲಿಲ್ಲ. ಆತ ಮಂಗಳೂರಿನಲ್ಲಿದ್ದ ಎಂದು ನಮಗೆ ತಿಳಿದಿರಲಿಲ್ಲ. ಪೊಲೀಸರಿಗೆ ಎಲ್ಲಾ ಸಹಕಾರ ನೀಡುತ್ತೇವೆ ಎಂದು ಹೇಳಿದರು.

Advertisement

ಆದಿತ್ಯ ರಾವ್ ತಂದೆ ಮತ್ತು ಸಹೋದರ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಬ್ಯಾಂಕ್ ಹಿರಿಯ ಅಧಿಕಾರಿಯೋರ್ವರು ಆದಿತ್ಯ ರಾವ್ ಕುಟುಂಬಿಕರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ನಮಗೆ ಆದಿತ್ಯನ ಬಗ್ಗೆ ಗೊತ್ತಿಲ್ಲ. ಆದರೆ ಸಹೋದರ ನಮ್ಮ ಬ್ಯಾಂಕ್ ಸಿಬ್ಬಂದಿ. ಒಳ್ಳೆಯ ಹುಡುಗ. ಆತನ ತಂದೆಯದ್ದು ಒಳ್ಳೆಯ ಕುಟುಂಬ. ನಾವು ಮನೆಯವರಿಗೆ ಧೈರ್ಯ ತುಂಬಲು ಬಂದಿದ್ದೇವೆ ಎಂದಿದ್ದಾರೆ.

ಆರೋಪಿ ಆದಿತ್ಯ ರಾವ್ ಬುಧವಾರ ಬೆಳಿಗ್ಗೆ ಬೆಂಗಳೂರು ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರ ಕಚೇರಿಯಲ್ಲಿ ಶರಣಾಗಿದ್ದ. ನಂತರ ಆತನನ್ನು ವಿಚಾರಣೆಗೆ   ಹಲಸೂರು ಗೇಟ್ ಪೊಲೀಸರ ವಶಕ್ಕೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next