Advertisement

ಎ. 6 ರಿಂದ ಮಂಗಳೂರು ವಿ.ವಿ. ಪದವಿ ಪರೀಕ್ಷೆ

11:02 PM Mar 04, 2022 | Team Udayavani |

ಮಂಗಳೂರು: ಮಂಗ ಳೂರು ವಿ ವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಎ. 6ರಿಂದ ಪದವಿ ಪರೀಕ್ಷೆ ನಡೆಯಲಿದೆ. ಸ್ನಾತಕೋತ್ತರ ಪದವಿ ಪರೀಕ್ಷಾ ದಿನಾಂಕ ಶೀಘ್ರ ಪ್ರಕಟವಾಗಲಿದೆ.

Advertisement

ಕುಲಪತಿ ಪ್ರೊ| ಪಿ.ಎಸ್‌. ಯಡಪ ಡಿತ್ತಾಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 2021-22ನೇ ಸಾಲಿನ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ.ಎಲ್‌. ಧರ್ಮ ಈ ಮಾಹಿತಿ ನೀಡಿದರು.

ವಿ.ವಿ. ಮಾ. 5ರ ಬಳಿಕ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿತ್ತು. ಆದರೆ ಸರಕಾರದ ಸೂಚನೆ ಮೇರೆಗೆ 1 ತಿಂಗಳು ಮುಂದೂಡಲಾಯಿತು. ಇತ್ತೀಚೆಗೆ ಪ್ರಾಂಶುಪಾಲರ ಸಭೆಯಲ್ಲಿ ಎ. 1ರಿಂದಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸರಕಾರ ಸಮ್ಮತಿ ಸಿಗದ ಕಾರಣ ಎ. 6ರಿಂದ ನಡೆಯಲಿದೆ.

ಪ್ರಾಯೋಗಿಕ ಪರೀಕ್ಷೆಯನ್ನು ಆಯಾಯ ಕಾಲೇಜು ಹಂತದಲ್ಲೇ 1 ತಿಂಗಳ ಅಂತರದೊಳಗೆ ಮಾಡಲಾಗುವುದು. ಕಳೆದ ಬಾರಿಯ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಈಗಾಗಲೇ ನೀಡುತ್ತಿದ್ದೇವೆ ಎಂದರು.

5 ವರ್ಷಗಳ ಇಂಟಗ್ರೇಟೆಡ್‌ ಎಂಬಿಎ (ಎಚ್‌ಎಸ್‌ಇ) ಮತ್ತು 5 ವರ್ಷಗಳ ಇಂಟಗ್ರೇಟೆಡ್‌ ಎಂಕಾಂ ಬಿಸಿನೆಸ್‌ ಡಾಟಾ ಅನಾಲಿಟಿಕ್ಸ್‌ ಹಾಗೂ 5 ವರ್ಷಗಳ (10 ಸೆಮಿಸ್ಟರ್‌) ಇಂಟಗ್ರೇಟೆಡ್‌ ಸ್ನಾತಕೋತ್ತರ ಎಲೆಕ್ಟ್ರಾನಿಕ್ಸ್‌ ಪದವಿ ಆರಂಭಿಸಲು ಅನುಮೋದನೆ ನೀಡಲಾಯಿತು.

Advertisement

ಮೂಡುಬಿದಿರೆ ಬನ್ನಡ್ಕದಲ್ಲಿ ವಿ.ವಿ. ಪ್ರಥಮ ದರ್ಜೆ ಕಾಲೇಜನ್ನು ಆಂತರಿಕ ಸಂಪನ್ಮೂಲದಿಂದ ನಿರ್ವಹಿಸಲು ಸರ ಕಾರದ ಒಪ್ಪಿಗೆೆ ಪಡೆಯಲು ನಿರ್ಧರಿಸ ಲಾಯಿತು. ಅನುಮತಿ ಬಾಕಿ ಇರುವ ವಿ.ವಿ. ಘಟಕ ಕಾಲೇಜುಗಳ ಪೈಕಿ ಸಂಧ್ಯಾ ಕಾಲೇಜು, ನೆಲ್ಯಾಡಿ ಹಾಗೂ ಮಂಗಳಗಂಗೋತ್ರಿ ಕಾಲೇಜಿನ ವಿವರ ವನ್ನೂ ಸರಕಾರಕ್ಕೆ ಕಳುಹಿಸಲು ನಿರ್ಧರಿ ಸಲಾಯಿತು. ಕುಲಸಚಿವ (ಆಡಳಿತ) ಡಾ| ಕಿಶೋರ್‌ ಕುಮಾರ್‌ ಪಿ.ಕೆ., ಎಫ್ಒ ಪ್ರೊ| ಮುನಿರಾಜು ಉಪಸ್ಥಿತರಿದ್ದರು.

ಬಿಎಸ್ಸಿ ಕಲಿತವರಿಗೂ ರಾಜ್ಯಶಾಸ್ತ್ರಕ್ಕೆ ಅವಕಾಶ!
ಬಿಎಸ್ಸಿ ವ್ಯಾಸಂಗ ಮಾಡಿದ 3 ವಿದ್ಯಾರ್ಥಿಗಳು ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪದವಿ ಮಟ್ಟದಲ್ಲಿ ರಾಜ್ಯ ಶಾಸ್ತ್ರವನ್ನು ಅಧ್ಯಯನ ಮಾಡಿರದಿದ್ದರೂ ರಾಜಕೀಯ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಅವಕಾಶ ನೀಡಿದರೆ ವೃತ್ತಿ ಜೀವನದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗಲಿದೆ ಎಂದು ಚರ್ಚಿಸಲಾಯಿತು. ಇದನ್ನು ಉಳಿದ ವಿಭಾಗಕ್ಕೂ ವಿಸ್ತರಿಸಬೇಕೆಂಬ ಸಲಹೆ ವ್ಯಕ್ತವಾಯಿತು. ಈ ಬಗ್ಗೆ ಸರಕಾರದ ಸಮ್ಮತಿ ಪಡೆದು ಜಾರಿಗೊಳಿಸಲು ತೀರ್ಮಾನಿಸಲಾಯಿತು.

ರಾಜ್ಯಪಾಲರಿಂದ ಭಾಷಣ
ಎ. 16ರ ಬೆಳಗ್ಗೆ 11.30ಕ್ಕೆ ಘಟಿಕೋತ್ಸವ ನಡೆಯಲಿದ್ದು, ಮೊದಲ ಬಾರಿಗೆ ರಾಜ್ಯಪಾಲರು ಆಶಯ ಭಾಷಣ ಮಾಡುವರು. ಈ ಸಂಬಂಧ ‌ ನಿಯಮಾವಳಿಗೆ ತಿದ್ದುಪಡಿ ಮಾಡಲಾಗಿದೆ. ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾ| ಅಬ್ದುಲ್‌ ನಝೀರ್‌ ಭಾಗವಹಿಸುವರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next