Advertisement

ಮಂಗಳೂರು ವಿ.ವಿ. ಪದವಿ ಮೌಲ್ಯಮಾಪನ ವಿಕೇಂದ್ರೀಕರಣ

12:27 AM Dec 03, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜು ಗಳಲ್ಲಿ ಇನ್ನು ಮುಂದೆ ಏಕಕಾಲದಲ್ಲಿ ತರಗತಿ, ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯಲಿದೆ. ಇದಕ್ಕಾಗಿ ಒಂದೇ ಇದ್ದ ಮೌಲ್ಯಮಾಪನ ಕೇಂದ್ರವನ್ನು ಎಂಟಕ್ಕೆ ವಿಸ್ತರಿಸುವ ಮಹತ್ವದ ತೀರ್ಮಾನವನ್ನು ಮಂಗಳೂರು ವಿ.ವಿ. ಕೈಗೊಂಡಿದೆ.

Advertisement

ಸ್ವಲ್ಪ ಸಮಯದಿಂದ ಬಾಕಿಯಾಗಿರುವ 2 ಮತ್ತು 4ನೇ ಸೆಮಿಸ್ಟರ್‌ ಗಳ ಮೌಲ್ಯ ಮಾಪನ ವನ್ನು ಈ ಮಾದರಿ ಯಲ್ಲಿ ಪ್ರಾರಂಭಿಕ ವಾಗಿ ಕೈಗೊಳ್ಳಲು ಉದ್ದೇಶಿಸ ಲಾಗಿದೆ. ಹೀಗಾಗಿ ಮಂಗಳೂರಿ ನಲ್ಲಿ 2 ಕೇಂದ್ರ ಮತ್ತು ಮೂಡುಬಿದಿರೆ, ಪುತ್ತೂರು, ಮಡಂತ್ಯಾರು, ಉಡುಪಿ, ಕುಂದಾಪುರ ಹಾಗೂ ಮಡಿಕೇರಿಯಲ್ಲಿ ತಲಾ ಒಂದೊಂದು ಕೇಂದ್ರ ಆರಂಭಿಸಲಾಗುತ್ತದೆ. ಮುಂದೆ 6ನೇ ಸೆಮಿಸ್ಟರ್‌ ಹೊರತು ಪಡಿಸಿ ಉಳಿದ ಸೆಮಿಸ್ಟರ್‌ ಮೌಲ್ಯಮಾಪನ ವನ್ನು ಇದೇ ಮಾದರಿಯಲ್ಲಿ ನಡೆಸುವ ಚಿಂತನೆ ಇದೆ.

ಮೌಲ್ಯಮಾಪಕರು ಪಾಠ- ಪರೀಕ್ಷೆಯ ಜತೆಗೆ ಬಿಡು ವಿನ ಸಮಯದಲ್ಲಿ ತಮ್ಮ ಕಾಲೇಜಿನ ಸನಿಹದಲ್ಲೇ ಇರುವ ಪರೀಕ್ಷಾ ಕೇಂದ್ರ ಕ್ಕೆ ತೆರಳಿ ಮೌಲ್ಯಮಾಪನ ಮಾಡ ಬಹು ದಾಗಿದೆ.

ಮೌಲ್ಯಮಾಪನ ಸರಾಗವಾಗಿ ನಡೆಯುವುದರ ಜತೆಗೆ ಪಾಠ, ಪರೀಕ್ಷೆಗಳನ್ನು ನಡೆಸುವುದಕ್ಕೆ ಇದರಿಂದ ಅನುಕೂಲ ಎಂಬುದು ವಿ.ವಿ. ಲೆಕ್ಕಾಚಾರ.

ಸನಿಹದ ಕೇಂದ್ರ ಆಯ್ಕೆಗೆ ಸೂಚನೆ
ಮೌಲ್ಯಮಾಪನದ ಎಲ್ಲ ಜವಾಬ್ದಾರಿ, ಗೌಪ್ಯತೆ ಮತ್ತು ಎಂಎಲ್‌ ಎಂಟ್ರಿಯ ಹೊಣೆಯನ್ನು ಪ್ರಾಂಶುಪಾಲರು ವಹಿಸಬೇಕಿದೆ. ಎಂಯುಲಿಂಕ್ಸ್‌ನ 30 ಪತ್ರಿಕೆಗಳಿಗೆ ಒಂದು ಡಿಎ (ಭತ್ತೆ) ಲಭಿಸಿದರೆ, ಯುಯುಸಿಎಂಎಸ್‌ನ 40 ಪತ್ರಿಕೆಗಳಿಗೆ ಒಂದು ಡಿಎ ಸಿಗಲಿದೆ. ಆಯಾಯ ಮೌಲ್ಯಮಾಪಕರು ಸಮೀಪವಿರುವ ಮೌಲ್ಯಮಾಪನ ಕೇಂದ್ರವನ್ನು ಆಯ್ದುಕೊಳ್ಳಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಪ್ರಾಂಶು ಪಾಲರು ಆಯಾಯ ಪರೀಕ್ಷಾ ಮಂಡಳಿ ಅಧ್ಯಕ್ಷರನ್ನು ಸಂಪರ್ಕಿಸಿ ಆಯಾಯ ಮೌಲ್ಯಮಾಪನದ ಕಾರ್ಯಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಬಹುದಾಗಿದೆ.
ಪ್ರಾಂಶುಪಾಲರು ಕಸ್ಟೋಡಿಯನ್‌ ಆಗಿದ್ದು, ಓರ್ವ ಸಂಯೋಜಕರು, ಓರ್ವ ಕಚೇರಿ ಸಿಬಂದಿ ಹಾಗೂ ಓರ್ವ ವ್ಯಕ್ತಿ ಈ ತಂಡದಲ್ಲಿರುತ್ತಾರೆ.

Advertisement

ಬಿಡುವಿನಲ್ಲಿ ಮೌಲ್ಯಮಾಪನ!
ಸಾಮಾನ್ಯವಾಗಿ ಕಾಲೇಜು ಉಪನ್ಯಾಸಕರು ವಾರದಲ್ಲಿ 16 ತಾಸು ಬೋಧನೆ ನಡೆಸಬೇಕಾಗುತ್ತದೆ. ಅದರಂತೆ ದಿನಕ್ಕೆ 3 ಅಥವಾ 4 ತಾಸು ಮಾತ್ರ ಬಳಕೆಯಾಗುತ್ತದೆ. ಹೀಗಾಗಿ ಉಳಿದ ಸಮಯದಲ್ಲಿ ಬಿಡುವು ಮಾಡಿಕೊಂಡು ಉಪನ್ಯಾ ಸಕರು ತಮ್ಮ ಕಾಲೇಜಿನ ಸನಿಹದ ಕೇಂದ್ರವನ್ನು ಆಯ್ಕೆ ಮಾಡಿ ಮೌಲ್ಯ ಮಾಪನ ಮಾಡಲು ಅವಕಾಶ ನೀಡಿರುವುದು ಉತ್ತಮ ಕ್ರಮ ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು “ಉದಯ ವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಏಕಕೇಂದ್ರ ಸುತ್ತಾಟಕ್ಕೆ ಮುಕ್ತಿ
ಈ ಹಿಂದೆ ವಿ.ವಿ. ವ್ಯಾಪ್ತಿಯ ಎಲ್ಲ ಕಾಲೇಜುಗಳ ಉತ್ತರಪತ್ರಿಕೆಗಳನ್ನು ವಿಷಯವಾರು ವಿಂಗಡಿಸಿ ಮಂಗಳೂ ರಿನ ಒಂದೇ ಕೇಂದ್ರಕ್ಕೆ ರವಾನಿಸಿ ಅಲ್ಲಿ ಮೌಲ್ಯ ಮಾಪನ ಮಾಡಲಾಗುತ್ತಿತ್ತು. ಮಡಿಕೇರಿ, ಉಡುಪಿ, ಸುಳ್ಯ ಸಹಿತ ವಿವಿಧ ಭಾಗಗಳ ಪ್ರಾಧ್ಯಾಪಕರು ಇಲ್ಲಿಗೇ ಬಂದು ಮೌಲ್ಯಮಾಪನ ನಡೆಸಬೇಕಿತ್ತು. ಕೊರೊನಾ ಸಂದರ್ಭ ಮಂಗಳೂರು, ಉಡುಪಿ ಹಾಗೂ ಮಡಿಕೇರಿ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು. ಈಗ ವಿ.ವಿ. ಮತ್ತಷ್ಟು ಸುಧಾರಣೆಗೆ ಮುಂದಾಗಿದೆ.

ಬಾಕಿ ಇರುವ 2 ಹಾಗೂ 4ನೇ ಸೆಮಿಸ್ಟರ್‌ ಮೌಲ್ಯಮಾಪನವನ್ನು ವಿ.ವಿ. ವ್ಯಾಪ್ತಿಯ ಆಯ್ದ 8 ಕೇಂದ್ರಗಳಿಗೆ ವಿಸ್ತರಿಸಲು ತೀರ್ಮಾನಿಸ ಲಾಗಿದೆ. ಇದರಿಂದ ಬೋಧನೆಗೆ ತೊಂದರೆ ಆಗದಂತೆ ಮೌಲ್ಯಮಾಪನ ನಡೆಸುವುದು ಸಾಧ್ಯವಾಗಲಿದೆ. ಸದ್ಯ ಜಾರಿ ಮಾಡಲಾಗಿರುವ ಈ ನಿಯಮಾವಳಿಯ ಅಂಶಗಳ ಅವಲೋಕನ ನಡೆಸಿದ ಬಳಿಕ ಮುಂಬರುವ ಮೌಲ್ಯಮಾಪನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ,
ಕುಲಪತಿ, ಮಂಗಳೂರು ವಿ.ವಿ.

ಮೌಲ್ಯಮಾಪನ ಕೇಂದ್ರಗಳು
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಬೆಸೆಂಟ್‌ ಮಹಿಳಾ ಕಾಲೇಜು, ಮಂಗಳೂರು
ಆಳ್ವಾಸ್‌ ಕಾಲೇಜು, ಮೂಡುಬಿದಿರೆ
ಪೂರ್ಣಪ್ರಜ್ಞ ಕಾಲೇಜು, ಉಡುಪಿ
ಭಂಡಾರ್‌ಕಾರ್ಸ್‌ ಕಾಲೇಜು, ಕುಂದಾಪುರ
ಸೇಕ್ರೆಡ್‌ ಹಾರ್ಟ್‌ ಕಾಲೇಜು, ಮಡಂತ್ಯಾರು
ಸಂತ ಫಿಲೋಮಿನಾ ಕಾಲೇಜು, ಪುತ್ತೂರು
ಎಫ್‌.ಎಂ.ಕೆ.ಎಂ.ಸಿ. ಕಾಲೇಜು, ಮಡಿಕೇರಿ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next