Advertisement

ಮಂಗಳೂರು –ಮುಂಬಯಿ: ಇಂಡಿಗೋ ವಿಮಾನಯಾನ ಆರಂಭ

12:36 AM Jun 20, 2022 | Team Udayavani |

ಮಂಗಳೂರು: ಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ರವಿವಾರ ಆರಂಭಗೊಂಡಿದೆ.

Advertisement

ಇಂಡಿಗೋದ ಏರ್‌ಬಸ್‌ ಎ320 ವಿಮಾನ ಪ್ರತಿದಿನ ಬೆಳಗ್ಗೆ 8.50ಕ್ಕೆ ಮುಂಬಯಿಯಿಂದ ಹೊರಟು 10.20ಕ್ಕೆ ಮಂಗಳೂರು ತಲುಪಲಿದೆ.

ಮಂಗಳೂರಿನಿಂದ 11ಕ್ಕೆ ಹೊರಟು 12.40ಕ್ಕೆ ಮುಂಬಯಿ ತಲುಪಲಿದೆ.

ಮುಂಬಯಿ -ಮಂಗಳೂರು ನಡುವೆ ಮಧ್ಯಾಹ್ನವಿದ್ದ ಇಂಡಿಗೋ ವಿಮಾನಯಾನವನ್ನು ಜೂನ್‌ ತಿಂಗಳ ಆರಂಭಕ್ಕೆ ಸ್ಥಗಿತಗೊಳಿಸಲಾಗಿತ್ತು.

ಹುಬ್ಬಳ್ಳಿ ವಿಮಾನದ ಸಮಯ ಬದಲಾವಣೆ
ಮೇ 1ರಿಂದ ಆರಂಭಗೊಂಡಿರುವ ಹುಬ್ಬಳ್ಳಿ-ಮಂಗಳೂರು ನಡುವಿನ ಇಂಡಿಗೋ ವಿಮಾನ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ.

Advertisement

ಹೊಸ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ಸಂಜೆ 7ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 8ಕ್ಕೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.20ಕ್ಕೆ ಹೊರಟು ಹುಬ್ಬಳ್ಳಿಗೆ 9.35ಕ್ಕೆ ತಲುಪಲಿದೆ.

ಅಲ್ಲಿಂದ 10 ಗಂಟೆಯ ಸುಮಾರಿಗೆ ಬೆಂಗಳೂರು ತಲುಪಲಿದೆ. ಈ ಹಿಂದೆ ಮಂಗಳೂರಿಗೆ ಸಂಜೆ 6.05ಕ್ಕೆ ತಲುಪಿ 6.35ಕ್ಕೆ ಹುಬ್ಬಳ್ಳಿಗೆ ಹೊರಡುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next