Advertisement

ಮಂಗಳೂರು: ನೂತನ ಬಿಷಪ್‌ ಅಧಿಕಾರ ಸ್ವೀಕಾರ

10:44 AM Sep 16, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೊಡು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಕೆಥೋಲಿಕ್‌ ಧರ್ಮಪ್ರಾಂತದ ಧರ್ಮಗುರು ರೆ| ಡಾ| ಪೀಟರ್‌ ಪಾವ್‌ ಸಲ್ಡಾನ್ಹಾ ಅವರು ಶನಿವಾರ ಇಲ್ಲಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಧಿವತ್ತಾಗಿ ಅಭಿಷೇಕಗೊಂಡು ಧರ್ಮಾಧ್ಯಕ್ಷ ದೀಕ್ಷೆಯನ್ನು ಸ್ವೀಕರಿಸಿ ಧರ್ಮಪ್ರಾಂತದ ಆಡಳಿತಾಧಿಕಾರವನ್ನು ವಹಿಸಿಕೊಂಡರು.

Advertisement

ನಿರ್ಗಮನ ಬಿಷಪ್‌ ಹಾಗೂ ಆಡಳಿತಾಧಿಕಾರಿ ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಅವರು ಮುಖ್ಯ ದೀಕ್ಷಾಧಿಕಾರಿಯಾಗಿ ಹಾಗೂ ಬೆಂಗಳೂರಿನ ಆರ್ಚ್‌ ಬಿಷಪ್‌ ರೆ| ಡಾ| ಪೀಟರ್‌ ಮಚಾದೊ ಮತ್ತು ಉಡುಪಿಯ ಬಿಷಪ್‌ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರ ಸಹಯೋಗದಲ್ಲಿ ನೂತನ ಬಿಷಪರನ್ನು ಅಭಿಷೇಕಿಸಿ ವಿಧಿ ಬದ್ಧವಾಗಿ ನಿಯೋಜಿಸಿದರು.

ದೇಶ ವಿದೇಶಗಳ 25ರಷ್ಟು ಧರ್ಮಾಧ್ಯಕ್ಷರು, 500 ಕ್ಕೂ ಮಿಕ್ಕಿ ಧರ್ಮ ಗುರುಗಳು ಹಾಗೂ 10,000 ಕ್ಕೂ ಮಿಕ್ಕಿ ಸಾರ್ವಜನಿಕರು ಇದಕ್ಕೆ ಸಾಕ್ಷಿಯಾದರು. 

ದೀಕ್ಷಾ ವಿಧಿ
ಬಲಿಪೂಜೆಯ ಪ್ರಾರ್ಥಯೊಂದಿಗೆ ದೀಕ್ಷೆಯ ಕಾರ್ಯಕ್ರಮ ಪ್ರಾರಂಭವಾಯಿತು. ದೀಕ್ಷಾ ವಿಧಿಯ ಪ್ರಾರಂಭದಲ್ಲಿ ಪವಿತ್ರಾತ್ಮನ ಕೃಪೆಗಾಗಿ ಪ್ರಾರ್ಥಿಸಲಾಯಿತು. ಬಳಿಕ ಪೀಟರ್‌ ಪಾವ್‌É ಸಲ್ಡಾನ್ಹಾ ಅವರನ್ನು ಮಂಗಳೂರಿನ ಬಿಷಪರಾಗಿ ನೇಮಕ ಮಾಡಿ ಪೋಪ್‌ ಫ್ರಾನ್ಸಿಸ್‌ ಅವರು ಕಳೆದ ಜುಲೈ 3ರಂದು ಹೊರಡಿಸಿದ ಮೂಲ ಪತ್ರ ಲ್ಯಾಟಿನ್‌ಭಾಷೆಯಲ್ಲಿದ್ದು ಅದನ್ನು ಭಾರತದ ಪೋಪ್‌ ಪ್ರತಿನಿಧಿ (ನುನ್ಸಿಯೊ)ಯ ಕೌನ್ಸಿಲರ್‌ ರೆ| ಝಾØವಿಯರ್‌ ಡಿ. ಫೆರ್ನಾಂಡಿಸ್‌ ಜಿ. ಅವರು ವಾಚಿಸಿ ಉಪಸ್ಥಿತರಿದ್ದ ಎಲ್ಲರ ಸಮಕ್ಷಮ ಪ್ರದರ್ಶಿಸಿದರು. ಬಳಿಕ ಅದರ ಇಂಗ್ಲಿಷ್‌ ಅನುವಾದವನ್ನು ಜಪ್ಪು ಸೈಂಟ್‌ ಜೋಸೆಫ್‌ ಸೆಮಿನರಿಯ ರೆಕ್ಟರ್‌ಫಾ| ಜೋಸೆಫ್‌ ಮಾರ್ಟಿಸ್‌ ಹಾಗೂ ಕೊಂಕಣಿ ಅನುವಾದವನ್ನು ಫಾ| ವಿಕ್ಟರ್‌ ಡಿ’ಮೆಲ್ಲೊ ವಾಚಿಸಿದರು. ಬಳಿಕ ಈ ನೇಮಕಾತಿಗಾಗಿ ದೇವರಿಗೆ ದೇವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಶಿವಮೊಗ್ಗ ಬಿಷಪ್‌ ರೆ| ಡಾ| ಫ್ರಾನ್ಸಿಸ್‌ ಸೆರಾವೊ ಪ್ರವಚನ ನೀಡಿದರು. ಪೀಟರ್‌ ಪಾವ್‌É ಸಲ್ಡಾನ್ಹಾ ನಮ್ಮ ಮಣ್ಣಿನ ಮಗ. ಅವರನ್ನು ಧರ್ಮಾಧ್ಯಕ್ಷ ಹುದ್ದೆಗೇರಿಸಿದ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಮಂಗಳೂರಿನ 2.5 ಲಕ್ಷ ಕ್ರೈಸ್ತರಿಗೆ ಸೇವೆ ಸಲ್ಲಿಸುವ ಜವಾಬ್ದಾರಿ ಅವರಿಗೆ ವಹಿಸಲಾಗಿದೆ. ಯೇಸು ಕ್ರಿಸ್ತರಿಗೆ ಸಾಕ್ಷಿಯಾಗಿ ಸೇವೆ ಒದಗಿಸುವ ಅವರಿಗೆ ಜನರ ಸಹಕಾರದ ಆವಶ್ಯಕತೆ ಇದೆ ಎಂದವರು ಹೇಳಿದರು. 

Advertisement

ಪ್ರವಚನದ ಬಳಿಕ ಸಮಸ್ತ ಸಂತರ ನಾಮದಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೀಕ್ಷೆ ಸ್ವೀಕರಿಸುವ ಪೀಟರ್‌ ಪಾವ್‌É ಸಲ್ಡಾನ್ಹಾ ಸಾಷ್ಟಾಂಗ ಪ್ರಾರ್ಥನೆ ಸಲ್ಲಿಸಿದರು. ವಿವಿಧ ಧಾರ್ಮಿಕ ವಿಧಿಗಳ ಬಳಿಕ ದೀಕ್ಷಾ ಸಂಸ್ಕಾರದ ತೈಲವನ್ನು ಹಣೆಗೆ ಹಚ್ಚಿ ಆಶೀರ್ವಚನವಿತ್ತರು. ಬಳಿಕ ಪವಿತ್ರ ಗ್ರಂಥ ಬೈಬಲನ್ನು ನೀಡಿ, ಕ್ರೈಸ್ತ ಸಭೆಯನ್ನು ಮುನ್ನಡೆಸುವ ವಿಶ್ವಾಸದ ಪ್ರತೀಕವಾಗಿ ಉಂಗುರವನ್ನು ತೊಡಿಸಿ, ಹಾರ ಹಾಕಿ, ಅಧಿಕಾರದ ಸಂಕೇತವಾಗಿ ಕ್ಯಾಪ್‌ ಹಾಗೂ ದಂಡವನ್ನು ಹಸ್ತಾಂತರಿಸಿದರು. ದೀಕ್ಷಾ ವಿಧಿಯ ಕೊನೆಯ ಭಾಗ ವಾಗಿ ಎಲ್ಲ ಧರ್ಮಾಧ್ಯಕ್ಷರು ಶಾಂತಿಯ ಸಂಕೇತವಾಗಿ ನೂತನ ಧರ್ಮಾಧ್ಯಕ್ಷ ರನ್ನು ಮುತ್ತಿಟ್ಟು, ಆಲಂಗಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸರಕಾರದ ಹಾಗೂ ಜಿಲ್ಲೆಯ ಪರವಾಗಿ ನೂತನ ಬಿಷಪರನ್ನು ಅಭಿನಂದಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ  ಕ್ರೈಸ್ತ ಮಿಶನರಿಗಳ ಸೇವೆ ಅಪಾರ ಎಂದರು. 

ಸಮ್ಮಾನ: ನೂತನ ಬಿಷಪ್‌ ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ, ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಮತ್ತು ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಆರ್ಚ್‌ ಬಿಷಪ್‌ ರೆ| ಡಾ| ಪೀಟರ್‌ ಮಚಾದೊ ಅವರನ್ನು ಸಮ್ಮಾನಿಸಲಾಯಿತು. 

ಸಂಸದ ನಳಿನ್‌ ಕುಮಾರ್‌ , ರಾಜ್ಯ ಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ ಮತ್ತು ಬಿ.ಎಂ. ಫಾರೂಕ್‌ ಸಹಿತ ವಿವಿಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. 

ರೊಜಾರಿಯೊ ಕೆಥೆಡ್ರಲ್‌ನ 
ರೆಕ್ಟರ್‌ ಹಾಗೂ ಕಾರ್ಯಕ್ರಮದ ಮುಖ್ಯ ಸಂಯೋಜಕ ಫಾ| ಜೆ.ಬಿ. ಕ್ರಾಸ್ತಾ, ಸಹ ಸಂಯೋಜಕ ಎಂ.ಪಿ. ನೊರೋನ್ಹಾ ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರು ಇದ್ದರು.

ಕನ್ನಡ, ಕೊಂಕಣಿ, ಇಂಗ್ಲಿಷ್‌,ಇಟಾಲಿಯನ್‌  ಭಾಷೆಗಳಲ್ಲಿ ಸಂದೇಶ ನೀಡಿದ ಬಿಷಪ್‌
“ಆತನ ಮಹಿಮಾ ಭರಿತ ಅನುಗ್ರಹದ ಸ್ತುತಿಗಾಗಿ’ ಎನ್ನುವ ನನ್ನ ಧ್ಯೇಯ ವಾಕ್ಯದಂತೆ, ದೇವರ ಅನುಗ್ರಹ ಪ್ರತಿಯೋಬ್ಬರಲ್ಲಿಯೂ ಕಾರ್ಯ ನಿರತವಾಗಿದೆ ಹಾಗೂ ಅದೇ ದೇವರ ಆತ್ಮ ಬೇರೆ ಬೇರೆ ಧರ್ಮ-ಸಂಪ್ರದಾಯದವರಾದ ನಮ್ಮೆಲ್ಲರನ್ನು ಒಟ್ಟುಗೂಡಿಸಿದೆ ಎನ್ನುವ ಸತ್ಯಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಇದು ಸಾವಿಗಿಂತ ಪ್ರೀತಿ ಹೆಚ್ಚು ಶಕ್ತಿಶಾಲಿ ಎನ್ನುವುದನ್ನು ತೋರಿಸುತ್ತದೆ. ಪ್ರೀತಿ ಎಲ್ಲ ಸಿದ್ಧಾಂತಗಳಿಗಿಂತ ಉತ್ತಮವಾದದ್ದು ಹಾಗೂ ಬೇರ್ಪಡಿಸುವ ಎಲ್ಲ ಗೋಡೆಗಳಿಗಿಂತ ಎತ್ತರವಾದದ್ದು’ ಎಂದು ದೀಕ್ಷೆಯ ಬಳಿಕ ನೂತನ ಬಿಷಪ್‌ ಪೀಟರ್‌ ಪಾವ್‌É ಸಲ್ಡಾನ್ಹಾ ಅವರು  ಕನ್ನಡ, ಕೊಂಕಣಿ, ಇಂಗ್ಲಿಷ್‌, ಇಟಾಲಿಯನ್‌ ಭಾಷೆಗಳಲ್ಲಿ ತಮ್ಮ ಸಂದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next