Advertisement

ಮಂಗಳೂರು : ಪರಂಪರೆಯ ಪ್ರದೇಶಕ್ಕೀಗ ಅತ್ಯಾಧುನಿಕ ಸ್ವರೂಪ

10:17 AM Jan 02, 2020 | mahesh |

ಮಂಗಳೂರು ಕೇಂದ್ರವಾಗಿ ದ.ಕ. ಜಿಲ್ಲೆಗೆ ಜಗತ್ತಿನ ಭೂಪಟದಲ್ಲಿ ಅನನ್ಯವಾದ ಸ್ಥಾನ. ಕರ್ನಾಟಕ ಕರಾವಳಿಯ ಜಿಲ್ಲೆ 1997ರ ವರೆಗೆ ಈಗಿನ ಉಡುಪಿ ಜಿಲ್ಲೆ ಸಹಿತ ಅವಿಭಜಿತ ದ.ಕ. ಜಿಲ್ಲೆಯಾಗಿತ್ತು.

Advertisement

1956ರಲ್ಲಿ ಭಾಷಾವಾರು ನೆಲೆಯ ಪುನರ್ವಿಂಗಡನೆಯ ಬಳಿಕ ಹೊಸ ಭೌಗೋ ಳಿಕ ಸ್ವರೂಪ ಪಡೆದ ಅವಿಭಜಿತ ಜಿಲ್ಲೆಯು ಕಾಲಾನುಕಾಲಕ್ಕೆ ಬದಲಾವಣೆ ಹೊಂದಿದೆ. ಈ ದ.ಕ. ಜಿಲ್ಲೆಯನ್ನೇ ಅಭಿವೃದ್ಧಿಯ ನೆಲೆಯಲ್ಲಿ ವಿಶ್ಲೇಷಿಸುವಾಗ, 50 ವರ್ಷಗಳ ಅವಧಿಯು ಅತ್ಯಂತ ಫಲಪ್ರದ ಮತ್ತು ನಿರ್ಣಾಯಕ. ವಿಶೇಷ ವೆಂದರೆ, ಈ ಜಿಲ್ಲೆಯ ಜನಮನದ ಜೀವನಾಡಿ ಎಂಬ ಹೆಮ್ಮೆಯ “ಉದಯವಾಣಿ’ ಕೂಡ ಸಾರ್ಥಕ 50 ವರ್ಷಗಳನ್ನು ಈಗ ಪೂರೈಸಿದೆ.

ಭವ್ಯ ಪರಂಪರೆ
ಕ್ರಿಸ್ತಪೂರ್ವದ ಅವಧಿಯಲ್ಲಿ ಈ ಪ್ರದೇಶ ಸತಿಯ ಪುತ್ರ ಎಂಬ ಹೆಸರಿನಲ್ಲಿ ಸಾಮ್ರಾಟ ಅಶೋಕನ ಆಳ್ವಿಕೆಯಲ್ಲಿತ್ತೆನ್ನುತ್ತಾರೆ ಇತಿಹಾಸಕಾರರು. ಮಂಗಳೂರಿನ ಹಳೆಯ ಬಂದರಿನ ಮೂಲಕ ಜಗತ್ತಿನ ಆಗಿನ ವಿವಿಧ ದೇಶಗಳೊಂದಿಗೆ ವ್ಯಾಪಾರ ವ್ಯವಹಾರ ಹೊಂದಿದ್ದು, ವಾಣಿಜ್ಯ ನಗರವೆಂಬ ಗೌರವಕ್ಕೆ ಪಾತ್ರವಾಗಿತ್ತು. ಮೀನುಗಾರಿಕೆ ಪ್ರಧಾನ ಉದ್ಯೋಗವಾಗಿತ್ತು.

ಇಂತಹ ಮಂಗಳೂರಿಗೆ ಮೊದಲಾಗಿ, ಅಂದರೆ 500 ವರ್ಷಗಳ ಹಿಂದೆ ಬಂದವರು- ಪೋರ್ಚು ಗೀಸರು. ಈ ಪ್ರದೇಶದಲ್ಲಿ ಅವರು ಆ ಕಾಲಕ್ಕೆ ಕೆಲವು ಕೈಗಾರಿಕೆಗಳ ಆರಂಭಕ್ಕೆ ಕಾರಣರಾದರು. ಗೋಡಂಬಿ ಕಾರ್ಖಾನೆಗಳನ್ನೂ ತೆರೆದರು. ಬಳಿಕ, ಅಂದರೆ 1799ರ ಅನಂತರ ಈ ಪ್ರದೇಶ ಸಂಪೂ ರ್ಣವಾಗಿ ಬ್ರಿಟಿಷರ ಆಡಳಿತಕ್ಕೆ ಬಂದಿತು. ಈ ಮಧ್ಯೆ ಅನೇಕ ರಾಜರು ಆಳ್ವಿಕೆ ನಡೆಸಿದರು. ಆ ಕಾಲಘಟ್ಟದಲ್ಲಿ ಇಲ್ಲಿಂದ ಮೀನು, ಅಕ್ಕಿ, ತೆಂಗಿನ ಕಾಯಿ, ಕಾಳು ಮೆಣಸು ಸಹಿತ ಸಾಂಬಾರ ಜೀನಸು ಗಳು ಪ್ರಮುಖವಾಗಿ ರಫ್ತಾಗುತ್ತಿದ್ದರೆ, ಬಳಿಕ ಮಂಗಳೂರು ಹೆಂಚು ಜಗದ್ವಿಖ್ಯಾತವಾಯಿತು. ವಿದೇಶಗಳಿಂದ ರೇಷ್ಮೆ, ಖರ್ಜೂರ, ರತ್ನಕಂಬಳಿ ಇತ್ಯಾದಿಗಳ ಜತೆ ಅರಬ್‌ ದೇಶಗಳಿಂದ ಕುದುರೆಗಳ ಆಮದು ಕೂಡ ನಡೆಯುತ್ತಿತ್ತು. ಆದರೆ, ಕೃಷಿ ಪ್ರಧಾನವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಇಲ್ಲಿನವರು ಮುಂಚೂಣಿಯಲ್ಲಿದ್ದರು.

ಆಧುನಿಕ ಸ್ವರೂಪ
ಜಿಲ್ಲೆ ಬಾಸೆಲ್‌ ಮಿಶನ್‌ರವರ ಮೂಲಕ ಮುದ್ರಣ ಮತ್ತಿತರ ಸೌಲಭ್ಯಗಳನ್ನು ಅಳವಡಿಸಿ ಕೊಂಡಿತ್ತು. 50 ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಾ ಮಂಗಳೂರು ಈಗ ರಾಜ್ಯದಲ್ಲಿ ಬೆಂಗಳೂರು ಬಳಿಕದ 2ನೇ ಮಹಾ ನಗರವಾ ಗಿದೆ. ಜಿಲ್ಲೆಯು ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ಮುಂತಾದ ಧಾರ್ಮಿಕ ಕ್ಷೇತ್ರಗಳ ಜತೆಯಲ್ಲಿ ಕಡಲ ಕಿನಾರೆಗಳು, ಪಿಲಿಕುಳ ನಿಸರ್ಗಧಾಮಗಳ ಆಕರ್ಷಣೆಯಿಂದಲೂ ಜನಪ್ರಿಯವಾಗಿದೆ.

Advertisement

70ರ ದಶಕದಿಂದೀಚೆಗೆ ಜಿಲ್ಲೆಯು ಕೈಗಾರಿಕೆ, ಉದ್ಯಮ, ವಾಣಿಜ್ಯ ಕ್ಷೇತ್ರಗಳಲ್ಲಿಯೂ ಅಪಾರ ಪ್ರಗತಿ ಸಾಧಿಸಿತು. ಈ ಅವಧಿಯಲ್ಲಿ ಪಣಂಬೂರಿ ನಲ್ಲಿ ನವಮಂಗಳೂರು ಬಂದರು (1975) ಸ್ಥಾಪನೆಯಾಯಿತು. ಬಜಪೆ ವಿಮಾನ ನಿಲ್ದಾಣವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಯಿತು (2012).

ಮಂಗಳೂರು ರಸಗೊಬ್ಬರ ಕಾರ್ಖಾನೆ, ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ, ಕೈಗಾರಿಕಾ ಪ್ರದೇಶಗಳು, ಖಾಸಗಿ ಉದ್ಯಮಗಳು ಈ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದವು. ಬ್ಯಾಂಕಿಂಗ್‌ ಉದ್ಯಮದ ತವರೂರು ಅಂತಾ ರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕೇಂದ್ರವಾಗಿ ಪರಿವರ್ತನೆಯಾಯಿತು. ಪ್ರೈಮಸಿ ಕ್ಯಾಂಡಲ್‌ ತಯಾರಿ ಸಂಸ್ಥೆಯ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ರಫ್ತಿನ ಮುಂಚೂಣಿ ತಲುಪಿತು. 1988ರಲ್ಲಿ ಸ್ಥಾಪನೆಯಾದ ಎಂಆರ್‌ಪಿಎಲ್‌ (ಈಗ ಒಎನ್‌ಜಿಸಿಯ ಸಹ ಸಂಸ್ಥೆ) ತೈಲ ಮತ್ತು ಸಂಬಂಧಿತ ಉತ್ಪನ್ನಗಳ ಸಂಸ್ಕರಣೆಯಲ್ಲಿ ಅತ್ಯಂತ ಪ್ರಮುಖ ಉದ್ಯಮವಾಗಿದೆ. ವಿಶೇಷ ಆರ್ಥಿಕ ವಲಯ ಅಸ್ತಿತ್ವಕ್ಕೆ ಬಂತು.

ಪೂರಕ ಪ್ರಗತಿ
ಶತಮಾನ ಪರಂಪರೆಯ ಸಾರಿಗೆ ಇತ್ಯಾದಿ ಸೌಲಭ್ಯಗಳು, ಮಾಹಿತಿ ತಂತ್ರಜ್ಞಾನದ (ಉದಾ: ಇನ್ಫೋಸಿಸ್‌) ಅನುಷ್ಠಾನ ಇತ್ಯಾದಿಗಳಿಂದ ಜಿಲ್ಲೆ ಪ್ರಸಿದ್ಧವಾಯಿತು. ಹೊಟೇಲ್‌ ಉದ್ಯಮ, ಐಸ್‌ಕ್ರೀಂ, ಮಲ್ಲಿಗೆ ಹೂ ರಫ್ತು ಇತ್ಯಾದಿಗಳೆಲ್ಲ ಇಲ್ಲಿ ಉಲ್ಲೇಖನೀಯ. ಬೆಂಗಳೂರು ಬಳಿಕ ಗರಿಷ್ಠ ವಾದ 2.19 ಲಕ್ಷ ರೂ. ತಲಾ ಬಂಡ ವಾಳ ಆದಾಯ ಜಿಲ್ಲೆಯದ್ದಾಗಿದೆ. ರಾಜ್ಯದಲ್ಲಿ ಜನಸಂಖ್ಯೆಯಲ್ಲಿ 8ನೇ ಜಿಲ್ಲೆಯಾದರೂ ಶೇ. 5.8ರ ಜಿಎಸ್‌ಡಿಪಿಯು ರಾಜ್ಯದ 2ನೇಯ ದ್ದಾಗಿದೆ. ಈ ಉಲ್ಲೇಖಗಳೆಲ್ಲ ಸಮಗ್ರವಲ್ಲ; ಪ್ರಾತಿನಿಧಿಕ. ಆದರೆ, ಜಿಲ್ಲೆಯು ಸರ್ವಾಂಗೀಣ ಪ್ರಗತಿಯೊಂದಿಗೆ ಉದ್ಯಮ, ಪರಿಸರದ ನಡುವೆ ಸಮತೋಲನ ಸಾಧಿಸಿದೆ. ರಿಯಲ್‌ ಎಸ್ಟೇಟ್‌ ಉದ್ಯಮ, ಚಿನ್ನಾಭರಣ ಉದ್ಯಮ ಇತ್ಯಾದಿಗಳೆಲ್ಲ ಪ್ರಗತಿಗೆ ಪೂರಕವಾಗಿದೆ. ಉದ್ಯಮಶೀಲತೆಯ ಹೊಸ ಸಾಧ್ಯತೆಗಳಿಗೆ ಇಲ್ಲಿನ ಜನತೆ ಮುಂದಾಗುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಗಳಲ್ಲಿ ಮುಂದಿನ ದಶಕದ ಅವಧಿ ಸ್ಮಾರ್ಟ್‌ಸಿಟಿ ಮಂಗಳೂರು ಜಿಲ್ಲೆಗೆ ಮತ್ತಷ್ಟು ಸ್ವಾಗತಾರ್ಹ ಕೊಡುಗೆ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next