Advertisement

ಮಂಗಳೂರು: ವಿದ್ಯಾರ್ಥಿನಿಯರ ನಾಪತ್ತೆ: ಪೊಲೀಸರು ಕೊಯಂಬತ್ತೂರಿಗೆ

11:24 PM Sep 22, 2022 | Team Udayavani |

ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರು ವಸತಿ ನಿಲಯದಿಂದ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತಂಡ ತನಿಖೆಗೆ ಕೊಯಂಬತ್ತೂರಿಗೆ ತೆರಳಿದೆ.

Advertisement

ಕಾಲೇಜು ಆವರಣದಲ್ಲೇ ಇರುವ ಹಾಸ್ಟೆಲ್‌ ನಿಂದ ಬುಧವಾರ ಮುಂಜಾನೆ 3 ಗಂಟೆ ವೇಳೆಗೆ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರು, ಒಬ್ಬರು ಚಿಕ್ಕಮಗಳೂರಿನವರು.  ಹಾಸ್ಟೆಲ್‌ನಿಂದ ಹೊರ ಹೋಗುತ್ತಿರು ವುದು ಕಾಲೇಜಿನ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ವಿದ್ಯಾರ್ಥಿನಿಯರು ರೈಲು ಮೂಲಕ ಕೊಯಂಬತ್ತೂರಿಗೆ ತೆರಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಈ ನಿಟ್ಟಿನಲ್ಲಿ ಶೋಧ ಕಾರ್ಯಕ್ಕೆ ಕಂಕನಾಡಿ ಪೊಲೀಸರ ತಂಡ ಅಲ್ಲಿಗೆ ತೆರಳಿದೆ.

Advertisement

Udayavani is now on Telegram. Click here to join our channel and stay updated with the latest news.

Next