Advertisement

ರಾಷ್ಟ್ರಮಟ್ಟದ ಸ್ಪರ್ಧೆಗಿಳಿದ ಮಂಗಳೂರು ಸ್ಮಾರ್ಟ್‌ಸಿಟಿ

01:17 PM Jul 30, 2022 | Team Udayavani |

ಮಹಾನಗರ: ದೇಶದ ವಿವಿಧ ಸ್ಮಾರ್ಟ್‌ ಸಿಟಿಗಳಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಸ್ಮಾರ್ಟ್‌ಸಿಟಿ ಅವಾರ್ಡ್‌’ ಸ್ಪರ್ಧೆ ಆಯೋಜಿಸುತ್ತಿದ್ದು, ಇದರಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿಯೂ ಭಾಗವಹಿಸುತ್ತಿದೆ.

Advertisement

ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿ ಎರಡನೇ ಹಂತಕ್ಕೆ ಆಯ್ಕೆಯಾದ 75 ಸ್ಮಾರ್ಟ್‌ಸಿಟಿಯಲ್ಲಿ ಮಂಗಳೂರು ಕೂಡ ಒಂದು. ಅದರಂತೆ ಇದೀಗ ಸದ್ಯ ರ್‍ಯಾಂಕ್‌ ಪ್ರಕಟಿಸಿದ್ದು, ಮಂಗಳೂರು ನಗರ 49ನೇ ಸ್ಥಾನದಲ್ಲಿದೆ. ಎರಡನೇ ಹಂತದ ಸ್ಪರ್ಧೆ 6 ವಿಭಾಗಗಳಲ್ಲಿ ನಡೆಯುತ್ತಿದೆ.

ಮುಖ್ಯವಾಗಿ ಪ್ರೊಜೆಕ್ಟ್ ಅವಾರ್ಡ್‌, ಇನೋವೇಶನ್‌ ಅವಾರ್ಡ್‌, ಸಿಟಿ ಅವಾರ್ಡ್‌, ಸ್ಟೇಟ್‌/ಯುಟಿ ಅವಾರ್ಡ್‌, ಲೀಡರ್‌ಶಿಪ್‌ ಅವಾರ್ಡ್‌, ಫಾರ್‌rನರ್ ಅವಾರ್ಡ್‌ ಎಂಬ ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತದೆ.

ಇದರಲ್ಲಿ ಪ್ರೊಜೆಕ್ಟ್ ಮತ್ತು ಸಿಟಿ ವಿಭಾಗದಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಸ್ಪರ್ಧಿಸುತ್ತಿದೆ.

ಎರಡನೇ ಹಂತದ ಸ್ಪರ್ಧೆಗೆ ಮಂಗಳೂರು ಸ್ಮಾರ್ಟ್‌ ಸಿಟಿಯಿಂದ ಈಗಾಗಲೇ ದಾಖಲೆ ಸಲ್ಲಿಸುವ ಕೆಲಸ ನಡೆದಿದೆ. ಪ್ರೊಜೆಕ್ಟ್ ವಿಭಾಗಕ್ಕೆ ನಗರದ ಗುಜ್ಜರಕೆರೆ ಕಾಮಗಾರಿ ಮತ್ತು ಸಿಟಿ ವಿಭಾಗಕ್ಕೆ ನಗರ ಒಟ್ಟಾರೆ ಸಿಟಿಯ ಕಾಮಗಾರಿ ವಿದ್ಯಮಾನವನ್ನು ಸಲ್ಲಿಕೆ ಮಾಡಲಾಗಿದೆ. ಪ್ರೊಜೆಕ್ಟ್ ವಿಭಾಗದಲ್ಲಿ ನೀರು, ಬಿಸಿನೆಸ್‌ ಮಾಡೆಲ್‌, ಗವರ್ನೆನ್ಸ್‌, ಸಾಂಸ್ಕೃತಿಕ, ಆರ್ಥಿಕತೆ, ನಗರದ ಹಸುರೀಕರಣ ಸಹಿತ ಹತ್ತು ಪರಿಕಲ್ಪನೆ ನೀಡಲಾಗಿದೆ. ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿಯಿಂದ ಯಾವ ರೀತಿ ಕೆಲಸ ನಡೆಯುತ್ತಿದೆ ಎಂದು ಸಾಭೀತುಪಡಿಸಲು ಇದು ಅವಕಾಶವಾಗಿದೆ. ಈ ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿ ಸ್ಮಾರ್ಟ್‌ಸಿಟಿಗೆ ಬೆಸ್ಟ್‌ ಸ್ಮಾರ್ಟ್‌ಸಿಟಿ ಅವಾರ್ಡ್‌ ದೊರಕಲಿದೆ.

Advertisement

ಹೆಚ್ಚುವರಿ ಮೂರು ವಿಭಾಗಕ್ಕೆ ಸ್ಪರ್ಧೆ

“ಬೆಸ್ಟ್‌ ಸ್ಮಾರ್ಟ್‌ಸಿಟಿ ಅವಾರ್ಡ್‌’ ಸಹಿತ ಕೇಂದ್ರ ಸರಕಾರದ ನಾಲ್ಕು ವಿಭಾಗಳಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿ ಸ್ಪರ್ಧಿಸುತ್ತಿದೆ. ಸಂಚಾರ ವ್ಯವಸ್ಥೆ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರವು “ಟ್ರಾನ್ಸ್‌ಪೋರ್ಟ್‌ 4ಆಲ್‌’ ಎಂಬ ವಿಶೇಷ ಅಭಿಯಾನ ಆಯೋಜಿಸಿದ್ದು, ಇದರ ಎರಡನೇ ಹಂತದ ಯೋಜನೆಗೆ ಮಂಗಳೂರು ಸ್ಮಾರ್ಟ್‌ ಸಿಟಿ ಆಯ್ಕೆಯಾಗಿದೆ. ದೇಶದ 17 ರಾಜ್ಯಗಳಲ್ಲಿನ 46 ನಗರಗಳು ಸ್ಪರ್ಧಿಸುತ್ತಿದೆ. ಮಂಗಳೂರು ನಗರವನ್ನು ಸೈಕಲ್‌ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ನಗರದ ಓಣಿಗಳಲ್ಲಿ ಸೈಕಲ್‌ ಪಾಥ್‌ ನಿರ್ಮಾಣಕ್ಕೆ ಸೈಕಲ್‌4ಚೇಂಜ್‌ ಸ್ಪರ್ಧೆ ಆಯೋಜಿಸಿದ್ದು, ಮಂಗಳೂರು ಸ್ಪರ್ಧಿಸುತ್ತಿದೆ. ಅದೇ ರೀತಿ, ಮಂಗಳೂರು ನಗರದ ಬೀದಿಗಳನ್ನು ಸಾರ್ವಜನಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ “ಸ್ಟ್ರೀಟ್ಸ್‌4ಪೀಪಲ್‌’ ಎಂಬ ಅಭಿಯಾನದಲ್ಲಿಯೂ ಮಂಗಳೂರು ನಗರ ಸ್ಪರ್ಧೆಗಿಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next