Advertisement

ಮಂಗಳೂರು ಗ್ರಾಮಾಂತರ: 3ನೇ ದಿನವೂ ಸಂಪೂರ್ಣ ಬಂದ್‌

12:11 AM Mar 31, 2020 | Sriram |

ಮಂಗಳೂರು: ಗ್ರಾಮಾಂತರದ ವಿವಿಧ ಪ್ರದೇಶಗಳಲ್ಲಿ 3ನೇ ದಿನವೂ ಸಂಪೂರ್ಣ ಸ್ತಬ್ಧವಾಗಿದ್ದು ಬಾರಿ ಸ್ಪಂದನೆ ವ್ಯಕ್ತವಾಗಿದೆ.

Advertisement

ಮೂಡುಬಿದಿರೆ: ಸಂಪೂರ್ಣ ಬಂದ್‌
ಮೂಡುಬಿದಿರೆ: ಲಾಕ್‌ಡೌನ್‌ಗೆ ಮೂಡುಬಿದಿರೆ ತಾಲೂಕು ಸಂಪೂರ್ಣ ಬಂದ್‌ ಆಗಿದೆ. ಮೂಡುಬಿದಿರೆ ಪೇಟೆಯಲ್ಲಿ ಮೆಡಿಕಲ್‌, ಪತ್ರಿಕೆ, ಹಾಲು, ಪೆಟ್ರೋಲಿಯಂ ಉತ್ಪ³ನ್ನ ಮಾರಾಟ ಮುಕ್ತವಾಗಿ ನಡೆದಿದೆ. ಕ್ಲಿನಿಕ್‌ಗಳು ಬಂದಾಗಿರುವುದರಿಂದ ಅನೇಕ ಮಂದಿ ಸಾಮಾನ್ಯ ರೋಗಿಗಳಿಗೆ ಸಮಸ್ಯೆಯಾಗಿದೆ. ಬೆಳುವಾಯಿ, ಇರುವೈಲು-ಕೊನ್ನೆಪದವು, ಕಲ್ಲಮುಂಡ್ಕೂರು, ಶಿರ್ತಾಡಿ ಹೀಗೆ ಮೂಡುಬಿದಿರೆ ತಾಲೂಕಿನ ನಾಲ್ಕೂ ದಿಕ್ಕುಗಳಲ್ಲಿ ಎಲ್ಲ ವ್ಯವಹಾರ ಬಂದ್‌ ಆಗಿದೆ.ಬೆಳುವಾಯಿ, ಕಲ್ಲಮುಂಡ್ಕೂರುಗಳಲ್ಲಿ ಬ್ಯಾಂಕಿಂಗ್‌, ಸಹಕಾರಿ ಸಂಘ, ಪೆಟ್ರೋಲಿಯಂ ಮಾರಾಟ ಎಲ್ಲವೂ ಬಂದ್‌. ಮಂಗಳವಾರ ಮತ್ತೆ ತೆರೆಯುವುದಾಗಿ ಮೂಲಗಳು ತಿಳಿಸಿವೆ.

ಕೇಸ್‌ ದಾಖಲು
ಉಳ್ಳಾಲ: ಕೋವಿಡ್‌ 19 ನ ಮುಂಜಾಗರೂಕತಾ ಕ್ರಮವಾಗಿ ಕಳೆದ ಒಂದು ವಾರದಿಂದ ಲಾಕ್‌ಡೌನ್‌ ಆದ ಹಿನ್ನಲೆಯಲ್ಲಿ ತುರ್ತು ಆವಶ್ಯಕತೆ ಹೊರತಪಡಿಸಿ ಜಾಲಿರೈಡ್‌ ನಡೆಸುತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತಿದ್ದರು. ಆದರೆ ಕಳೆದ ಮೂರು ದಿನಗಳಿಂದ ಸಂಪೂರ್ಣ ಕಪ್ಯೂìನ ನಡುವೆಯೇ ತಮ್ಮ ವಾಹನಗಳಲ್ಲಿ ಸಂಚಾರ ನಡೆಸುವ ಚಾಲಕರಿಗೆ ಲಾಠಿಯ ಬಿಸಿ ಜತೆ ಬಸ್ಕಿ ತೆಗೆಯುವ ಶಿಕ್ಷೆಯನ್ನು ನೀಡಿ ಅವರು ಇನ್ನೊಮ್ಮೆ ಹೊರಗಡೆ ಬರದ ರೀತಿಯಲ್ಲಿ ಮನೆಯಲ್ಲೇ ಉಳಿಯುವಂತೆ ಪೊಲೀಸರು ಮಾಡುತ್ತಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ಮತ್ತು ಕೊಣಾಜೆ ಪೊಲೀಸರಿಗೆ ಜನರನ್ನು ಹೊರಗಡೆ ಬರುವುದನ್ನು ತಡೆಯುವುದೇ ಸಮಸ್ಯೆಯಾಗಿದೆ. ಕಳೆದ ಮೂರು ದಿನಗಳಿಂದ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಜನರು ಶಿಕ್ಷೆಗೊಳಗಾದರೆ, ಕೊಣಾಜೆ ವ್ಯಾಪ್ತಿಯಲ್ಲಿ ಬಸ್ಕಿ ಶಿಕ್ಷೆಗೊಳಗಾದವರು ಅತ್ಯಂತ ಕಡಿಮೆ. ಕೆಲವೊಂದು ವಾಹನ ಚಾಲಕರು ಬಸ್ಕಿ ಶಿಕ್ಷೆಯಿಂದ ತಪ್ಪಿಸಿದರೆ ಅವರನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಕೇಸು ದಾಖಲು ಮಾಡಲಾಗುತ್ತಿದೆ.

ಸತತ ಮೂರನೇ ದಿನ ಬಂದ್‌
ಸುರತ್ಕಲ್‌: ಮನಪಾ ವ್ಯಾಪ್ತಿಯ ಸುರತ್ಕಲ್‌ನಲ್ಲಿ ಸತತ ಮೂರನೇ ದಿನ ಸಂಪೂರ್ಣ ಬಂದ್‌ ಆಗಿತ್ತು. ಸತತವಾಗಿ ಅಂಗಡಿ ಮುಗ್ಗಟ್ಟು ಬಂದ್‌ ಆಗಿದ್ದ ಕಾರಣ ಶಾಸಕರು, ವಿವಿಧ ಎನ್‌ ಜಿ ಒ ತಂಡಗಳು, ಜಿಲ್ಲಾಡಳಿತ ವಿವಿಧ ಕಾರ್ಮಿಕರ ಕೇರಿಗಳಲ್ಲಿ ಉಚಿತ ಊಟದ ವ್ಯವಸ್ಥೆ, ಅಕ್ಕಿ ವಿತರಣೆಯನ್ನು ಮಾಡಿ ನೆರವು ನೀಡಲಾಯಿತು. ಸುರತ್ಕಲ್‌ನಲ್ಲಿ ವೇಣು ಟಿಫಿನ್‌ ಕೇಂದ್ರದಲ್ಲಿ ಬಿಜೆಪಿ, ವಿವಿಧ ಸಂಘಗಳ ಸಹಕಾರದಲ್ಲಿ ಉಚಿತ ಊಟದ ವಿತರಣೆ, ಕರಾವಳಿ ಫ್ರೆಂಡ್ಸ್‌ ಕ್ಲಬ್‌ ನಿಂದ ಅಕ್ಕಿವಿತರಣೆ, ಹೋಟೆಲ್‌ ಉದ್ಯಮಿ ಟಿ.ಎನ್‌ ರಮೇಶ್‌ ಅವರಿಂದ ಅಕ್ಕಿ ವಿತರಣೆ ಸಹಿತ ಕಾರ್ಮಿಕ ಕಾಲನಿಗಳಲ್ಲಿ ನೆರವು ನೀಡಲಾಯಿತು. ಬಂದ್‌ ಆಗಿದ್ದ ಕಾರಣ ಔಷಧ, ಹಾಲು, ಪತ್ರಿಕೆ ಸಹಿತ ಪ್ರಮುಖ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Advertisement

ಹಳೆಯಂಗಡಿ: ಹಾಲಿನ ಮಾರಾಟಕ್ಕೆ ಸೀಮಿತವಾದ ಪೇಟೆ
ಹಳೆಯಂಗಡಿ: ಲಾಕ್‌ಔಟ್‌ನಿಂದ ಜಿಲ್ಲೆಯಾದ್ಯಂತ ಮುಂದುವರಿದ ಬಂದ್‌ನ ಪರಿಣಾಮ ಮಾ. 30ರಂದು ಮುಖ್ಯ ಪೇಟೆಯಲ್ಲಿ ಹಾಲಿನ ಮಾರಾಟಕ್ಕೆ ಮಾತ್ರ ಸೀಮಿತವಾಯಿತು. ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.

ಸ್ಥಳೀಯ ಹಾಲಿನ ಸೊಸೈಟಿಯಲ್ಲಿ ಹಾಲು ಸಂಗ್ರಹಣೆಯನ್ನು ರದ್ದುಗೊಳಿಸಿದ್ದರಿಂದ ನಂದಿನಿ ಹಾಲಿನ ಪ್ಯಾಕೆಟ್‌ ಹಾಲನ್ನು ಗ್ರಾಹಕರು ಖರೀದಿಸಿದರು, ಸೊಸೈಟಿಗೆ ನೀಡುವ ಖಾಯಂ ಸದಸ್ಯರು ಹಾಲನ್ನು ತಮ್ಮ ತಮ್ಮ ಮನೆಯ ಅಕ್ಕ ಪಕ್ಕದಲ್ಲಿ ವಿತರಿಸಿದರು.
ಗ್ರಾಮೀಣ ಭಾಗದಲ್ಲಿ ಯೂ ಸಂಪೂರ್ಣವಾಗಿ ಬಂದ್‌ ನಡೆಸಲಾಗಿತ್ತು. ಕೆಲವೊಂದು ಕಡೆಗಳಲ್ಲಿ ತರಕಾರಿ ಮಾರುವ ಟೆಂಪೋಗಳನ್ನು ಪೊಲೀಸರ ಮೂಲಕ ಹಿಂದೆ ಕಳುಹಿಸಲಾಯಿತು. ಮೆಡಿಕಲ್‌ ಸ್ಟೋರ್‌ನಲ್ಲಿ ನಿರ್ದಿಷ್ಟ ಔಷಧಿಗಳು ಸೂಕ್ತವಾದ ದಾಸ್ತಾನುಗಳಿಲ್ಲದೇ ಗ್ರಾಹಕರು ಸಹ ಪರದಾಡಿದರು.

ಹಳೆಯಂಗಡಿ ಪರಿಸರದಲ್ಲಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರೊಂದಿಗೆ ಅಂಗನವಾಡಿ ಕಾರ್ಯಕರ್ತರು ಸಹ ಮನೆ ಮನೆಗೆ ಭೇಟಿ ನೀಡಿ ಕ್ವಾರಂಟೈನ್‌ನಲ್ಲಿರುವ ಮನೆಗಳಲ್ಲಿ ಆರೋಗ್ಯ ವಿಚಾರಿಸಿದರು. ಹಳೆಯಂಗಡಿ ಪಂ. ವ್ಯಾಪ್ತಿಯಲ್ಲಿ ಒಟ್ಟು 22 ಮನೆಗಳು ಈ ವ್ಯವಸ್ಥೆಯಲ್ಲಿ ನಿಗಾವಹಿಸಲಾಗಿದೆ.

ಗ್ರಾಮ ಪಂಚಾಯತ್‌, ಬ್ಯಾಂಕ್‌ಗಳು, ಸೊಸೈಟಿಗಳು ತೆರೆದಿದ್ದವು ವ್ಯವಹಾರ ನಡೆಸಲು ಗ್ರಾಹಕರು, ಗ್ರಾಮಸ್ಥರು ಸುಳಿಯಲಿಲ್ಲ. ಪಡಿತರವನ್ನು ಸಾಮಾಜಿಕ ಅಂತರದಲ್ಲಿ ವಿತರಿಸಲಾಗಿದೆ. ಪ್ರತೀ ಹತ್ತು ಕಿ.ಮೀ.ಗೆ ಒಂದರಂತೆ ಪೆಟ್ರೋಲ್‌ ಪಂಪ್‌ನ್ನು ಸೀಮಿತಗೊಳಿಸಿರುವುದರಿಂದ ಪಡುಪಣಂಬೂರು ಪಂ.ಬಳಿಯ ಪೆಟ್ರೋಲ್‌ ಪಂಪ್‌ ಮಾತ್ರ ಚಾಲನೆಯಲ್ಲಿತ್ತು.

ಸ್ತಬ್ಧವಾದ ಕಿನ್ನಿಗೋಳಿ
ಕಿನ್ನಿಗೋಳಿ: ದ. ಕ ಜಿಲ್ಲೆಯಲ್ಲಿ ಕೋವಿಡ್‌ 19 ರೋಗ ತಡೆಗಟ್ಟುವ ನಿಟ್ಟಿನಿಲ್ಲಿ ಜಿಲ್ಲಾಡಳಿತ ದ. ಕ. ಜಿಲ್ಲೆ ಸಂರ್ಪೂಣ ಬಂದ್‌ ಘೋಷಣೆ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಕಿನ್ನಿಗೋಳಿ ಪರಿಸರದಲ್ಲಿ ಸಂರ್ಪೂಣ ಬಂದ್‌ ಆಗಿದೆ. ಕಿನ್ನಿಗೋಳಿ ಪರಿಸರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಿವೆ. ಕಿನ್ನಿಗೋಳಿಯ ಮೂರು ಮೆಡಿಕಲ್‌ ಶಾಪ್‌ಗ್ಳು ತೆರೆದಿದೆ, ಬೆಳಗ್ಗೆ ಪೇಪರ್‌ ಹಾಗೂ ಹಾಲು ಅಂಗಡಿ ತೆರೆದು ಗ್ರಾಹಕರಿಗೆ ವಿತರಣೆ ಮಾಡಿದ ಬಳಿಕ ಮುಚ್ಚಲಾಗಿದೆ. ಕಿನ್ನಿಗೋಳಿಯಲ್ಲಿ ಬೆರಳಣಿಕೆಯ ಬ್ಯಾಂಕ್‌ಗಳು, ಅಂಚೆ ಕಚೇರಿ ನಿಗದಿತ ಸಮಯದ ತನಕ ತೆರೆದಿತ್ತು. ಪೆಟ್ರೋಲ್‌ ಬಂಕ್‌ ಮಧ್ಯಾಹ್ನ 12 ರತನಕ ತೆರೆದಿತ್ತು ಮತ್ತೆ ಮುಚ್ಚಲಾಗಿದೆ. ಮೂಲ್ಕಿ ಪೋಲಿಸರು ಗಸ್ತು ತಿರುಗುತ್ತಿದ್ದು ಲಾಟಿ ಎತ್ತದೆ ಸೌಮ್ಯ ರೀತಿಯಲ್ಲಿ ಜನರಲ್ಲಿ ಲಾಕ್‌ ಡೌನ್‌ ಹಾಗೂ ಕರೊನಾದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ಕಂಡು ಬಂತು.

ಉತ್ತಮ ಸ್ವಂದನೆ
ಮೂಲ್ಕಿ: ಕೋವಿಡ್‌ 19ಸೊಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಬಾರಿ ಸ್ಪಂದನೆ ಜನರಿಂದ ದೊರಕಿದೆ. ತರಕಾರಿ, ದಿನಸಿ, ಹಾಲಿನ ಅಂಗಡಿಗಳು ಮಾತ್ರ ತೆರೆದಿದ್ದು, ಜನ ಬೆಳಗ್ಗೆ ಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next