Advertisement

ಮಂಗಳೂರು : ಅಮಾನ್ಯ ಮಾಡಿದ 1.92 ಕೋಟಿ ರೂ.ಮೌಲ್ಯದ ನೋಟುಗಳ ವಶ

12:44 PM Nov 19, 2021 | Team Udayavani |

ಮಂಗಳೂರು: 1.92 ಕೋಟಿ ರೂಪಾಯಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ಸಹಿತ ಮೂವರನ್ನ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

Advertisement

1000 ಮುಖಬೆಲೆಯ 500 ರೂ ಮುಖಬೆಲೆಯ 1 ಕೋಟಿ 92 ಲಕ್ಷದ 50 ಸಾವಿರ ಮೌಲ್ಯದ ಅಮಾನ್ಯಗೊಂಡ ನೋಟುಗಳು ಮತ್ತು ಸಾಗಿಸುತ್ತಿದ್ದ ಇನ್ನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಧಿತರು, ಮಂಗಳೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ ನ ದೀಪಕ್(32)ಮತ್ತು ಬಜ್ಪೆಯ ನಾಸಿರ್ (40)ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರದುರ್ಗ, ಶಿವಮೊಗ್ಗ ಕಡೆಯಿಂದ ತಂದಿದ್ದ ನೋಟುಗಳ ಸಮೇತ ಆರೋಪಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಬ್ಯಾಂಕ್ ನಲ್ಲಿ ಮೌಲ್ಯದ ಶೇ.50 ರಷ್ಟು ಕೊಡುತ್ತಾರೆ ಎಂದು ವಂಚಿಸಿ ಬೇರೆಯವರಿಗೆ ನೀಡಲೆಂದು ತಂದಿದ್ದರು ಎಂದು ಮಂಗಳೂರು ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next