Advertisement

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ರಾಜೀನಾಮೆಗೆ ಐವನ್ ಡಿಸೋಜ ಆಗ್ರಹ

03:32 PM Feb 29, 2020 | Naveen |

ಮಂಗಳೂರು: ದೆಹಲಿಯಲ್ಲಿ ನಡೆದ ಹಿಂಸಾಚಾರ ನಿಯಂತ್ರಿಸಲು ವಿಫಲರಾದ ಗೃಹಸಚಿವ ಅಮಿತ್ ಶಾ ಮತ್ತು ಅಮೇರಿಕ ಅಧ್ಯಕ್ಷರಾದ ಟ್ರಂಪ್ ಗೆ ಸ್ಲಂ ತೋರಿಸಲು ಮುಜುಗರಪಟ್ಟ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದರು.

Advertisement

ಮಂಗಳೂರಿನಲ್ಲಿ ಶನಿವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೆಹಲಿಯಲ್ಲಿ 45 ಮಂದಿ ಹಾಗೂ ದೇಶದಲ್ಲಿ 76 ಮಂದಿ ಸಿಎಎ ವಿರೋಧಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಎಎ ವಿರುದ್ದ ಪ್ರತಿಭಟನೆ 75 ದಿನಗಳಿಂದ ನಡೆಯುತ್ತಿದೆ. ದೇಶದಲ್ಲಿ ಇವತ್ತು ಎರಡನೇ ಸ್ವಾತಂತ್ರ‍್ಯ ಹೋರಾಟ ನಡೆಯುತ್ತಿದೆ. ಅಮಿತ್ ಶಾ ಅವರು ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದೂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಟ್ರಂಪ್ ಗೆ ಸ್ಲಂ ತೋರಿಸಲು ಮುಜುಗರಪಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next