Advertisement

ಮಂಗಳೂರು ಫಿಸಿಯೋಕಾನ್‌ 2018

10:33 AM Jan 15, 2018 | Team Udayavani |

ಮಹಾನಗರ: ಜಿಲ್ಲಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ಸಹಯೋಗದೊಂದಿಗೆ ನಗರದ ವಿಕಾಸ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿ ಆಶ್ರಯದಲ್ಲಿ ಮಂಗಳೂರು ಫಿಸಿಯೋಕಾನ್‌ 2018 ಇದರ ಉದ್ಘಾಟನ ಕಾರ್ಯಕ್ರಮ ಇತ್ತೀ ಚೆ ಗೆ ವಿಕಾಸ್‌ ಕಾಲೇಜಿನಲ್ಲಿ ಜರಗಿತು.

Advertisement

ಮ್ಯಾನುವಲ್‌ ಥೆರಪಿ ಫೌಂಡೇಶನ್‌ ಆಫ್ ಇಂಡಿಯಾದ ಅಧ್ಯಕ್ಷ ಡಾ| ಉಮಾಶಂಕರ್‌ ಮೊಹಂತಿ ಮಾತನಾಡಿ, ಉದ್ಯೋಗವನ್ನು ಪ್ರೀತಿಸಿ, ವಿಕಾಸ್‌ ಅಂದ್ರೆ ಬೆಳವಣಿಗೆ. ರಕ್ತದಾನ ಶಿಬಿರ ಆಗುವ ಈ ಸಂದರ್ಭ ಬೆಳವಣಿಗೆಯ
ಸಂಕೇತ ಎಂದರು.

ಪುಣ್ಯದ ಕೆಲಸ
ವಿಕಾಸ್‌ ಸಮೂಹ ವಿದ್ಯಾಸಂಸ್ಥೆಯ ಮುಖ್ಯಸ್ಥ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಪುಣ್ಯದ ಕೆಲಸ. ಮುಂದಿನ ದಿನಗಳಲ್ಲಿ ಇಂತಹ ಕೆಲಸ ಹೆಚ್ಚು ಹೆಚ್ಚು ಆಗಬೇಕು ಎಂದು ಶುಭಹಾರೈಸಿದರು.

ವೆನ್ಲಾಕ್‌ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ ಆಫೀಸರ್‌ ಡಾ| ಶರತ್‌ ಕುಮಾರ್‌ ರಕ್ತದ ಗುಂಪುಗಳ ಬಗ್ಗೆ ತಿಳಿಸಿದರು. ಕನಚ್ಚಾರ್‌ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ| ಸುಹೈಲ್‌ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ ಒದಗಿಸಿದರು.

ಆರ್ಗನೈಸಿಂಗ್‌ ಚೇರ್ಮ ನ್‌ ಡಾ| ಯು.ಟಿ. ಇಫ್ತಿಕರ್‌, ವೆನ್ಲಾಕ್‌ ಆಸ್ಪತ್ರೆಯ ಡಿಎಂಒ ಡಾ| ರಾಜೇಶ್ವರಿ, ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್‌ ಕುಮಾರ್‌ ಕಲ್ಯ, ಸಂಚಾಲಕ ಡಾ| ಡಿ. ಶ್ರೀಪತಿ ರಾವ್‌, ಸಮನ್ವಯಾ
ಧಿಕಾರಿ ಪಾರ್ಥಸಾರಥಿ ಪಾಲೆಮಾರ್‌, ಪ್ರಾಂಶುಪಾಲ ಡಾ| ರಮೇಶ್‌ ಕೆ., ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ
ಪ್ರೊ| ಟಿ. ರಾಜಾರಾಮ್‌ ರಾವ್‌, ಡಾ| ದಿನೇಶ್‌ ನಾಯಕ್‌ ಉಪಸ್ಥಿತರಿದ್ದರು. ಉಪ ನ್ಯಾ ಸಕಿ ಐಶ್ವರ್ಯಾ ರಾವ್‌
ನಿರೂಪಿಸಿ, ಡಾ| ಶ್ರೀದೇವಿ ವಂದಿಸಿದರು. ರಕ್ತದಾನದ ಮಹತ್ವವನ್ನು ಬಿಂಬಿಸುವ ಮೂಕಾಭಿನಯ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next