Advertisement
ಈ ಸಂದರ್ಭ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಎರಡು ಬಾರಿ ಪಡಿತರ ಕಿಟ್ ವಿತರಣೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 45 ಸಾವಿರ ಪಡಿತರ ಕಿಟ್ ವಿತರಣೆ ಮಾಡಲಾಗಿದೆ. ಬಿಜೆಪಿ ಮುಖಂಡರು, ಕಾರ್ಪೊರೇಟರ್‌ಗಳು, ಕಾರ್ಯಕರ್ತರ ನೆರವಿನಲ್ಲಿ ವಿವಿಧ ಹಂತದಲ್ಲಿ ನೆರವು ಒದಗಿಸಲಾಗಿದೆ. ಇದೀಗ ಕ್ಷೇತ್ರದ ಎಲ್ಲೆಡೆ ಇರುವ ಅರ್ಹರಿಗೆ ಒಟ್ಟು 6 ಸಾವಿರ ಕಿಟ್ ಕಳುಹಿಸಿಕೊಡಲಾಗಿದೆ ಎಂದರು.
ಜನರಲ್ಲಿ ಎಚ್ಚರ ಅಗತ್ಯ
ಸುರತ್ಕಲ್‌ನಲ್ಲಿ ಕೋವಿಡ್-19 ಪಾಸಿಟಿವ್ ಕೇಸ್ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ಅವರಿಗೆಯಾವ ರೀತಿಯಲ್ಲಿ ಸೋಂಕು ತಗಲಿದೆ ಎಂಬುದು ತಿಳಿಯಬೇಕಷ್ಟೆ. ಈಗಾಗಲೇ ಗುಡ್ಡೆಕೊಪ್ಲ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಪ್ರಥಮ ಪ್ರಕರಣ ಇದಾಗಿದ್ದು, ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ.ಹೇಳಿದರು.