Advertisement
ಬೆಳಗ್ಗೆ 7 ಗಂಟೆಗೆ ಕೃಷ್ಣಾಪುರ ಮಸೀದಿ, ಗಣೇಶಪುರ ದೇವಸ್ಥಾನ, ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್, ಅಡ್ಕ ಮಸೀದಿ, ಮಂಗಳಾದೇವಿ, ಕುದ್ರೋಳಿ ಗೋಕರ್ಣ ನಾಥ, ಉರ್ವ ಮಾರಿಯಮ್ಮ ದೇವಸ್ಥಾನ, ಗುರುದ್ವಾರ ಸಹಿತ ಪುಣ್ಯ ಕ್ಷೇತ್ರಗಳಲ್ಲಿ ಪ್ರಾರ್ಥನೆ ಮಾಡಿ, ಉರ್ವ ಮೈದಾನದಿಂದ ಲೇಡಿಹಿಲ್, ಲಾಲ್ ಬಾಗ್ ಆಗಿ ಮೆರವಣಿಗೆಯಲ್ಲಿ ಬಂದ ಬಾವಾ ಅವರು ಬಳಿಕ ಸೈಕಲ್‌ನಲ್ಲಿ ಪಾಲಿಕೆಗೆ ಬಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರಕ್ಕೂ ಮುನ್ನ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿ ಬೆಳಪು ದೇವಿಪ್ರಸಾದ್ ಶೆಟ್ಟಿ, ಶಾಸಕ ಮೊಯಿದಿನ್ ಬಾವಾ ಮಾತನಾಡಿದರು. ಬಾವಾ ಅವರು ಕುಟುಂಬ ಹಾಗೂ ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಮೇಯರ್ ಭಾಸ್ಕರ್ ಮೊಯಿಲಿ, ಮೆಲ್ವಿನ್, ಮಲ್ಲಿಕಾ ರ್ಜುನ್, ಆನಂದ ಅಮೀನ್, ಮಂಗಳೂರು ಬಾವಾ, ಸಚಿನ್ ಅಡಪ, ನವೀನ್ ಡಿ’ಸೋಜಾ, ಗಿರೀಶ್ ಆಳ್ವ,ನಾಗವೇಣಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ದೀಪಕ್ ಪೂಜಾರಿ, ಶಶಿಧರ್ ಹೆಗ್ಡೆ, ಹರಿನಾಥ್ ಸುರೇಂದ್ರ ಕಾಂಬ್ಳಿ, ಪುರುಷೋತ್ತಮ್ ಚಿತ್ರಾಪುರ, ಸದಾಶಿವ ಶೆಟ್ಟಿ, ಕವಿತಾ ಸನಿಲ್, ಪ್ರತಿಭಾ ಕುಳಾಯಿ, ಶಕುಂತಳಾ ಕಾಮತ್, ಮೊದಲಾದವರಿದ್ದರು.