ಕಾಂಗ್ರೆಸ್‌ನ 60, ಬಿಜೆಪಿಯ 60, ಜೆಡಿಎಸ್‌ನ 12, ಸಿಪಿಎಂನ 7, ಸಿಪಿಐಯ 1, ಎಸ್‌ಡಿಪಿಐಯ 6, ಜೆಡಿಯುನ 2, ಡಬ್ಲೂಪಿಐಯ 3, ಕರ್ನಾಟಕ ರಾಷ್ಟ್ರಸಮಿತಿಯ 2 ಹಾಗೂ ಪಕ್ಷೇತರರು 27 ಸೇರಿದಂತೆ 180 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರರ ತೀರ್ಪು ಯಾರ ಪರ ಎಂಬ ಕುತೂಹಲಕ್ಕೆ ಗುರುವಾರ ಉತ್ತರ ದೊರೆಯಲಿದೆ.
Advertisement
21 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ(ಕಾಂಗ್ರೆಸ್-ಬಿಜೆಪಿ), 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ, 9 ವಾರ್ಡ್‌ಗಳಲ್ಲಿ ಚತುಷ್ಕೋನ ಸ್ಪರ್ಧೆ, 6 ಕ್ಷೇತ್ರಗಳಲ್ಲಿ ಪಂಚಕೋನ ಸ್ಪರ್ಧೆ ನಡೆದಿದೆ. ಗುರುವಾರ ಬೆಳಗ್ಗೆ 7.45ಕ್ಕೆ ಅಭ್ಯರ್ಥಿ/ಚುನಾವಣ ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರವು ಮಾಡಲಾಗುತ್ತದೆ. 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. 53 ಮೇಲ್ವಿಚಾರಕರು, 53 ಎಣಿಕೆ ಸಹಾಯಕರು ಸೇರಿದಂತೆ 183 ಸಿಬಂದಿ ನಿಯೋಜನೆ ಮಾಡಲಾಗಿದೆ. ಡಿಸಿ ಸಿಂಧೂ ಬಿ. ರೂಪೇಶ್ ಮತ ಎಣಿಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದರು. ಮತ ಎಣಿಕೆ ಕೇಂದ್ರ ಸುತ್ತಮುತ್ತ ತೀವ್ರ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ನ. 14ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಪಾಂಡೇಶ್ವರ ರೊಸಾರಿಯೋ ಶಾಲೆಯ ಮತ ಎಣಿಕೆ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144ರ ಅನ್ವಯ ನಿರ್ಬಂಧಕ ಆಜ್ಞೆಯನ್ನು ವಿಧಿಸಲಾಗಿದೆ.