Advertisement
ಮತದಾನ: ಬೆಳಗ್ಗೆ 10.00 – 02.00
Related Articles
12 ಗಂಟೆ ಸುಮಾರಿಗೆ ಹೋದಾಗ ಮತಗಟ್ಟೆಯಲ್ಲಿ ಬೆರಳೆಣಿಕೆಯಷ್ಟು ಮತದಾರರು ಮಾತ್ರ ಇದ್ದರು. ಈ ಬೂತ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನೀರಸ ಮತದಾನವಾಗಿತ್ತು. ಬೈಕಂಪಾಡಿ ಶಾಲೆಯಲ್ಲಿದ್ದ ಮೂರು ಬೂತ್‌ನಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಬೂತ್ ಸಂಖ್ಯೆ 69ರಲ್ಲಿ 876 ಮತದಾರರಲ್ಲಿ 108 ಮಂದಿ, ಬೂತ್ 71ರಲ್ಲಿ 882 ಮತದಾರರಲ್ಲಿ 200 ಮಂದಿ ಮತ್ತು 72ನೇ ಬೂತ್‌ನಲ್ಲಿ 529 ಮತದಾರರ ಪೈಕಿ 154 ಮಂದಿ ಮಾತ್ರ ಮತ ಚಲಾಯಿಸಿದ್ದರು. ಇದೇ ವಾರ್ಡ್‌ನ 70ನೇ ಬೂತ್‌ನಲ್ಲಿಯೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ನೀರಸವಾಗಿತ್ತು ಎನ್ನುವ ಅಭಿಪ್ರಾಯವನ್ನು ಅಲ್ಲಿನ ಮತಗಟ್ಟೆ ಅಧಿಕಾರಿ ವ್ಯಕ್ತಪಡಿ ಸಿದರು. ಮಧ್ಯಾÖ °ದವರೆಗೆ 70ನೇ ಬೂತ್‌ನಲ್ಲಿ ಒಟ್ಟು 1,311 ಮಂದಿ ಮತದಾರ ಪೈಕಿ 469 ಮಂದಿ ಮತದಾರರು ಮತ ಚಲಾಯಿಸಿದ್ದರು. ಬಹುತೇಕ ಎಲ್ಲ ಮತದಾನ ಕೇಂದ್ರಗಳಲ್ಲಿಯೂ ಕುಡಿ ಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿತ್ತು.
Advertisement
ಮತದಾನ ಚುರುಕಾಗಿಲ್ಲಇಡ್ಯಾ ಪಶ್ಚಿಮ ವಾರ್ಡ್‌ನ ಹೊಸಬೆಟ್ಟು ಶಾಲೆ ಬೂತ್‌ಗೆ ಭೇಟಿ ನೀಡಿದಾಗ ಮತಗಟ್ಟೆ ಅಧಿಕಾರಿ ಮೀನಾಕ್ಷಿ ಅವರು ಸುದಿನಕ್ಕೆ ಪ್ರತಿಕ್ರಿಯಿಸಿ “ಈ ಶಾಲೆಯಲ್ಲಿ ಒಟ್ಟು 3 ಬೂತ್‌ಗಳಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ಅಷ್ಟೇನು ಚುರುಕಿನಿಂದ ಕೂಡಿರಲಿಲ್ಲ. ಮಧ್ಯಾಹ್ನ 12 ಗಂಟೆ ವೇಳೆಗೆ 51ನೇ ಬೂತ್‌ನಲ್ಲಿ 1332 ಮಂದಿ ಮತದಾರರಲ್ಲಿ 543, 57ನೇ ಬೂತ್‌ನಲ್ಲಿ 1,279 ಮತದಾರರಲ್ಲಿ 411 ಮತ್ತು 52ನೇ ಬೂತ್‌ನಲ್ಲಿ 1,139 ಮಂದಿ ಮತದಾರರಲ್ಲಿ 379 ಮಂದಿ ಮತದಾರರು ಮತಚಲಾಯಿಸಿದ್ದರು’ ಎಂದಿದ್ದಾರೆ. ಸೂಕ್ಷ್ಮ ಮತಗಟ್ಟೆಯಲ್ಲಿ ಕಾಟಿಪಳ್ಳ ಉತ್ತರ ವಾರ್ಡ್ ನಲ್ಲಿ 12ರಿಂದ 16ರ ವರೆಗಿನ ಬೂತ್ ಇದ್ದು, ಹೊರಗಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು¤. ಜತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ತಂಡ ಕಾವಲು ಕಾಯುತ್ತಿತ್ತು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ತಪಾಸಣೆ ನಡೆಸುತ್ತಿದ್ದರು. ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಕಾವಲು
ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ವೃತ್ತ ಬಳಿ ಸೋಮವಾರ ರಾತ್ರಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಕಾಟಿಪಳ್ಳ ಉತ್ತರ ವಾರ್ಡ್ ನಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋàರ್ಸ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಮತಗಟ್ಟೆಗಳಲ್ಲಿ ನೀರಿನ ವ್ಯವಸ್ಥೆ
ನಗರದಲ್ಲಿ ಮಂಗಳವಾರ ಬಿಸಿಲಿನ ತಾಪ ಹೆಚ್ಚಿತ್ತು. ಇದರಿಂದ ರಕ್ಷಣೆ ಪಡೆಯಲು ನೆರವಾಗುವಂತೆ ಮತದಾನ ಕೇಂದ್ರ ಹೊರಗಡೆ ಶಾಮಿಯಾನ ಅಳವಡಿಕೆ ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಪಕ್ಷಗಳ ಬೂತ್‌ಗಳಲ್ಲಿಯೂ ನೀರು, ಚಹಾ ಇಟ್ಟಿದ್ದು ಕಂಡು ಬಂತು. ಸೆಕೆಯ ಕಿರಿಕಿರಿ
ನಗರದಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ ಮಧ್ಯಾಹ್ನ ವೇಳೆ 34 ಡಿ.ಸೆ.ನಷ್ಟಿತ್ತು. ಇದರಿಂದಾಗಿ ಮತದಾರರು ಸೆಕೆಯ ಕಿರಿ ಕಿರಿ ಅನುಭವಿಸಿದರು. ಹೆಚ್ಚಿನ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ಕೆಲವರು ತಂಪು ಪಾನೀಯ, ಐಸ್ ಕ್ರೀಂ ಮೊರೆ ಹೋಗುತ್ತಿದ್ದರು. - ನವೀನ್ ಭಟ್ ಇಳಂತಿಲ