Advertisement

ಹಳಿತಪ್ಪಿದ ಮಂಗಳೂರು-ಮುಂಬಯಿ ರೈಲು

05:29 PM Jul 23, 2021 | Team Udayavani |

ಪಣಜಿ: ಗೋವಾ ಗಡಿ ಭಾಗದಲ್ಲಿ ಕರ್ನಾಟಕದ ಸರಹದ್ದಿನ ಸೋನಾವಳಿಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಮಾರ್ಗದಲ್ಲಿ ಗುಡ್ಡ ಕುಸಿತವುಂಟಾದ ಹಿನ್ನೆಲೆಯಲ್ಲಿ ಮುಂಬಯಿ ತೆರಳುವ ಮಂಗಳೂರು-ಮುಂಬಯಿ ಸ್ಪೇಶಲ್ ಟ್ರೇನ್ ಎಂಜಿನ್ ಮತ್ತು ಒಂದು ಭೋಗಿ ಹಳಿ ತಪ್ಪಿದೆ.

Advertisement

ಈ ಘಟನೆಯ ನಂತರ ಕೊಂಕಣ ರೈಲ್ವೆ ಮಾರ್ಗದ 5 ಮತ್ತು ದಕ್ಷಿಣ ಮಧ್ಯ ರೈಲ್ವೆ ಮಾರ್ಗದ 1 ಸೇರಿ ಒಟ್ಟೂ 6 ರೈಲುಗಳನ್ನು ರದ್ಧುಗೊಳಿಸಲಾಗಿದೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಈ ರೈಲಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಬಸ್ ಮೂಲಕ ರೈಲ್ವೆ ನಿಲ್ದಾಣಕ್ಕೆ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next