ಮಂಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ ಸಂಭವಿಸಿ ಕಾರಿನ ಮುಂಭಾಗ ಭಾಗಶಃ ಸುಟ್ಟು ಹೋದ ಘಟನೆ ಬುಧವಾರ ಮಧ್ಯಾಹ್ನ ಪಿವಿಎಸ್ ವೃತ್ತದ ಬಳಿ ಸಂಭವಿಸಿದೆ.
ಪಿವಿಎಸ್ ವೃತ್ತದ ಕಡೆಯಿಂದ ನವಭಾರತ ವೃತ್ತ ಕಡೆಗೆ ಹೋಗುತ್ತಿದ್ದ ಕಾರಿನ ಮುಂಭಾಗದಲ್ಲಿ ಹೊಗೆ ಕಂಡ ಚಾಲಕ ಕೂಡಲೇ ಕಾರು ನಿಲ್ಲಿಸಿದರು. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಕಾರಿನ ಮುಂಭಾಗ ಭಾಗಶಃ ಸುಟ್ಟು ಹೋಗಿದೆ. ಬ್ಯಾಟರಿ ಬಳಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಉಂಟಾಗಿರಬಹುದೆಂದು ಶಂಕಿಸಲಾಗಿದೆ.
ಘಟನೆ ವೇಳೆ ಕಾರಿನಲ್ಲಿ ಚಾಲಕ ಸಹಿತ ಇಬ್ಬರಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕಳ್ಳತನದ ವೇಳೆ ಎಚ್ಚರಗೊಂಡ ಮಾಲೀಕ : ಓಡುವ ಭರದಲ್ಲಿ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ ಕಳ್ಳ
Related Articles
ತಿಂಗಳ ಹಿಂದೆಯೂ ಘಟನೆ
ಕಳೆದ ಮಾ. 29ರಂದು ರಾತ್ರಿ ವೇಳೆ ಕಾರಿನಲ್ಲಿ ಬೆಂಕಿ ಉಂಟಾಗಿ ಇಡೀ ಕಾರು ಸುಟ್ಟು ಹೋದ ಘಟನೆ ಶಕ್ತಿನಗರದ ಪಾರ್ಕ್ ಬಳಿ ಸಂಭವಿಸಿತ್ತು. ಮಹಿಳೆಯೋರ್ವರು ಕಾರಿನಲ್ಲಿ ಮೊಬೈಲ್ ಚಾರ್ಜ್ ಗೆ ಇಟ್ಟು ನಾಯಿ ಜತೆ ಪಾರ್ಕ್‌ಗೆ ಹೋಗಿ ವಾಪಸ್ ಬರುವಾಗ ಮೊಬೈಲ್ ಚಾರ್ಜ್ ಇಟ್ಟ ಸ್ಥಳದಲ್ಲಿ ಬೆಂಕಿ ಕಾಣಸಿಕೊಂಡು ಅದು ಇಡೀ ಕಾರನ್ನು ವ್ಯಾಪಿಸಿತ್ತು.