ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಯಾವುದೇ ಆದೇಶನ ಹೊರಡಿಸಬಾರದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
Advertisement
ಮಸೀದಿಯಲ್ಲಿ ದೇಗುಲ ಹೋಲುವ ರಚನೆ ಕಂಡುಬಂದ ಹಿನ್ನೆಲೆಯಲ್ಲಿ ಮಸೀದಿ ನವೀಕರಣಕ್ಕೆ ತಡೆಯಾಜ್ಞೆ ನೀಡುವಂತೆ ವಿಎಚ್‌ಪಿ ಮನವಿ ಮಾಡಿತ್ತು.
ಆದರಂತೆ ತಡೆಯಾಜ್ಞೆ ಸಿಕ್ಕಿತ್ತು. ತಡೆಯಾಜ್ಞೆ ತೆರವಿಗೆ ಮಸೀದಿ ಆಡಳಿತ ಮಂಡಳಿ ಮನವಿ ಮಾಡಿತ್ತು.
ಜ್ಞಾನವಾಪಿ ಮಾದರಿಯಲ್ಲಿ ಸರ್ವೇ ನಡೆಸಬೇಕು ಎಂದು ವಿಎಚ್‌ಪಿ ಪರ ವಕೀಲರು ಮನವಿ ಮಾಡಿದ್ದರು.