Advertisement
ಆದರೆ ಬೆಳಗ್ಗೆ 6ರಿಂದ 9ರವರೆಗೆ ಆವಶ್ಯ ವಸ್ತುಗಳ ಖರೀದಿಗೆ ಅನುಮತಿ ಇದ್ದ ಕಾರಣ ಈ ಸಂದರ್ಭದಲ್ಲಿ ಮಂಗಳೂರು ನಗರ ಸಹಿತ ಜಿಲ್ಲಾದ್ಯಂತ ವಾಹನಗಳ ಓಡಾಟ ಜಾಸ್ತಿಯಾಗಿತ್ತು. 9 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಿ 10 ಗಂಟೆ ವೇಳೆಗೆ ಎಲ್ಲರೂ ಮನೆ ಸೇರ ಬೇಕೆಂದು ಜಿಲ್ಲಾಡಳಿತ ಗುರುವಾರವೇ ಆದೇಶ ಹೊರಡಿಸಿತ್ತು. ಬೆಳಗ್ಗೆ 9 ಗಂಟೆ ಆಗುತ್ತಿದ್ದಂತೆ ಮಂಗಳೂರು ನಗರದಲ್ಲಿ ಪೊಲೀಸರು/ಪಾಲಿಕೆ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ನಗರದ ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು. 10 ಗಂಟೆಯ ಬಳಿಕ ಅನಗತ್ಯ ಸಂಚಾರದ ವಾಹನಗಳನ್ನು ತಡೆದ ಪೊಲೀಸರು ತಪಾಸಣೆ ನಡೆಸಿ ವಾಪಸ್ ಕಳುಹಿಸಿದರು; ವಾಹನ ಮುಟ್ಟುಗೋಲು ಹಾಕುವ ಎಚ್ಚರಿಕೆ ನೀಡಿದರು. ಇನ್ನೂ ಕೆಲವರಿಗೆ ದಂಡ ವಿಧಿಸಿದರು.
Related Articles
Advertisement
ಉಡುಪಿ ಯಥಾಸ್ಥಿತಿ :
ಉಡುಪಿ ಜಿಲ್ಲೆಯಲ್ಲಿ ಎಂದಿನಂತೆ ನಿರ್ಬಂಧ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಸಹಿತ ಅಗತ್ಯ ವಸ್ತುಗಳ ಮಳಿಗೆಗಳು ತೆರೆದಿರುತ್ತವೆ. ತುರ್ತು ಅಗತ್ಯವಿರುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನೇನು ಇರುತ್ತದೆ :
ನಂದಿನಿ ಹಾಲಿನ ಬೂತ್, ದಿನ ಪತ್ರಿಕೆಗಳು ಮತ್ತು ಜಿಲ್ಲೆಯಲ್ಲಿನ ಹಾಪ್‌ಕಾಮ್ಸ್ ಗಳು ಬೆಳಗ್ಗಿನ ಹೊತ್ತು 6ರಿಂದ 9ರ ವರೆಗೆ ಕಾರ್ಯಾಚರಿಸಲು ಅನುಮತಿ ಇದೆ.
ಆನ್‌ಲೈನ್ ಸೇವಾ ಪೂರೈಕೆದಾರರಿಗೆ ಸೇವೆ ಒದಗಿಸಲು ಹೊಟೇಲ್‌ಗಳು ಮತ್ತು ರೆಸ್ಟೊರೆಂಟ್‌ಗಳ ಅಡಿಗೆ ಮನೆಗಳನ್ನು ನಿರ್ವಹಿಸಲು ಅನುಮತಿ ಇದೆ.
ಆನ್‌ಲೈನ್ ಆಹಾರ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ.
ಏನೇನು ಇರುವುದಿಲ್ಲ :
ದಿನಸಿ ಮತ್ತಿತರ ಯಾವುದೇ ಅಂಗಡಿ ತೆರೆದಿಡಲು ಅವಕಾಶ ಇಲ್ಲ.
ಮೀನು, ಮಾಂಸದ ಅಂಗಡಿ ಹಾಗೂ ಇತರ ಆಹಾರದ ಅಂಗಡಿಗೆ ಅನುಮತಿ ಇಲ್ಲ.
ಅನಗತ್ಯ ವಾಹನ ಸಂಚಾರ ಸಂಪೂರ್ಣ ಬಂದ್.