Advertisement

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

11:05 PM Nov 27, 2020 | Team Udayavani |
ನಗರದ ಕದ್ರಿ ಬಳಿಯ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ನಲ್ಲಿ ಲಷ್ಕರ್ ಉಗ್ರರ ಪರವಾದ ಗೋಡೆ ಬರಹ ಬರೆಯಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಲಷ್ಕರ್ ಜಿಂದಾಬಾದ್ ಎಂಬಿತ್ಯಾದಿ ಬರಹಗಳನ್ನು ಬರೆಯಲಾಗಿದೆ. ಲಷ್ಕರ್ ಉಗ್ರರನ್ನು ಕರೆಸುವಂತೆ ನಮಗೆ ಒತ್ತಾಯ ಮಾಡಬೇಡಿ ಎಂದೆಲ್ಲಾ ಗೋಡೆಯಲ್ಲಿ ಬರೆಯಲಾಗಿದೆ. ಇದು ಜನನಿಬಿಡ ರಸ್ತೆಯಾಗಿದ್ದು, ಹತ್ತಿರದಲ್ಲೇ ಕದ್ರಿ ಪಾರ್ಕ್, ಕದ್ರಿ ಪೊಲೀಸ್ ಠಾಣೆಯಿದೆ. ನಿನ್ನೆ ತಡರಾತ್ರಿ ಈ ವಿವಾದಾತ್ಮಕ ಬರಹ ಬರೆಯಲಾಗಿದೆ ಎನ್ನಲಾಗಿದ್ದು, ಸುದ್ದಿತಿ ಳಿದ ತಕ್ಷಣ ಕದ್ರಿ ಪೊಲೀಸರು ಆಗಮಿಸಿದ್ದು, ಸದ್ಯ ಪೊಲೀಸರು ವಿವಾದಿತ ಗೋಡೆ ಬರಹದ ಮೇಲೆ ಬಣ್ಣ ಬಳೆದಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next