ಮಂಗಳೂರು: ಕುಕ್ಕರ್ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಮಹಮ್ಮದ್ ಶಾರೀಕ್‌ನನ್ನು ಬುಧವಾರ ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದು ಆತನ ಖಾತೆಗಳಿಗೆ ವಿದೇಶಗಳಿಂದ ಹಣ ವರ್ಗಾವಣೆ ಯಾಗಿರುವುದು ಗೊತ್ತಾಗಿದೆ.
ಡಾರ್ಕ್‌ವೆಬ್ ಮೂಲಕ ಶಾರೀಕ್ ಖಾತೆ ತೆರೆದಿದ್ದ. ವಿದೇಶಗಳಿಂದ ವರ್ಗಾವಣೆಯಾಗುತ್ತಿದ್ದ ಹಣವನ್ನು ರೂಪಾಯಿಗೆ ಪರಿವರ್ತಿಸಿ ಹಲವಾರು ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ. ಮೈಸೂರಿನಲ್ಲಿ ಹಲವರ ಬ್ಯಾಂಕ್ ಖಾತೆಗೆ ಹಣ ಹಾಕಿಸಿದ್ದ ಎಂಬ ಮಾಹಿತಿ ಲಭಿಸಿದ್ದು ಅದರಂತೆ ಪೊಲೀಸರು ಮೈಸೂರಿನಲ್ಲಿ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಎನ್‌ಐಎ 3 ತಂಡ: ತನಿಖೆ ಕೈಗೆತ್ತಿಕೊಳ್ಳಲು ಎನ್‌ಐಎಯ ಮೂರು ತಂಡಗಳು ಮಂಗಳೂರಿಗೆ ಆಗಮಿಸಿವೆ.