Advertisement

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

01:59 AM Oct 09, 2021 | Team Udayavani |

ಕುಂಬಳೆ: ಮಂಗಳೂರು- ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ಕಾಮಗಾರಿ ಕೊನೆಗೂ ಅರಂಭಗೊಂಡಿದೆ. ಮೊದಲ ಹಂತದಲ್ಲಿ ತಲಪಾಡಿಯಿಂದ ಚೆಂಗಳ ವರೆಗಿನ 39 ಕಿ.ಮೀ. ಕಾಮಗಾರಿ ನಡೆಯಲಿದೆ.

Advertisement

ಎರಡನೇ ಹಂತದಲ್ಲಿ ಚೆಂಗಳ – ನೀಲೇಶ್ವರ ವರೆಗಿನ 37 ಕಿ.ಮೀ. ಮತ್ತು ತೃತೀಯ ಹಂತದಲ್ಲಿ ನೀಲೇಶ್ವರ -ತಳಿಪ್ಪರಂಬ ನಡುವಿನ 40 ಕಿ.ಮೀ. ಸೇರಿದಂತೆ ನಾಲ್ಕು ಹಂತದ ಕಾಮಗಾರಿಗೆ ಹಸಿರು ನಿಶಾನೆ ದೊರಕಿದೆ.

ಕೇಂದ್ರ ಸಾರಿಗೆ ಸಚಿವರು ಆನ್‌ಲೈನ್‌ ಮೂಲಕ ಹೆದ್ದಾರಿಯ ಕಾಮಗಾರಿಯನ್ನು ಈ ಹಿಂದೆಯೇ ಉದ್ಘಾಟಿಸಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಇಕ್ಕೆಲಗಳ ಮರಗಳನ್ನು ಕಡಿಯುವ, ಕಟ್ಟಡಗ‌ಳನ್ನು ತೆರವುಗೊಳಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ.

ಸಾರ್ವಜನಿಕರಲ್ಲಿ ಸಮಾಧಾನ
ಎಂದೋ ಮುಗಿಯಬೇಕಿದ್ದ ಕಾಮಗಾರಿ ಹಲವಾರು ಅಡೆ ತಡೆಗಳನ್ನು ಭೇದಿಸಿ ಆರಂಭಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಆದರೆ ಮನೆ, ಕಟ್ಟಡಗಳನ್ನು ಕಳೆದುಕೊಂಡ ಸಂತ್ರಸ್ತರು ಪರ್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಸಿಕ್ಕಿದ ಪರಿಹಾರ ನಿಧಿಯು ನಿವೇಶನ ಖರೀದಿಸಿ ಮನೆ ಕಟ್ಟಲು ಸಾಲದೆ ಕೆಲವರು ಬಾಡಿಗೆ ಮನೆಯನ್ನು ಅವಲಂಬಿಸಬೇಕಾಗಿದೆ.

ಇದನ್ನೂ ಓದಿ:500 ರೂ., 2 ಸಾವಿರ ರೂ. ನೋಟಿಂದ ಮಹಾತ್ಮಾ ಗಾಂಧಿ ಫೋಟೋ ತೆಗೆಯಿರಿ

Advertisement

ಮದುವೆ ಹಾಲ್‌ಗ‌ಳು, ಶಾಲೆ, ಅಂಗಡಿ ಮುಂಗಟ್ಟುಗಳ ಸ್ಥಳ ರಸ್ತೆ ಪಾಲಾಗ ಲಿದೆ. ಕಟ್ಟಡದ ಮೌಲ್ಯದ ದುಪ್ಪಟ್ಟು ಪರಿಹಾರ ನಿಧಿಯನ್ನು ನೀಡುತ್ತಿದ್ದರೂ ಅದು ಮಾಲಕರ ಪಾಲಾಗಲಿದೆ. ಅಲ್ಲಿ ಅದೆಷ್ಟೋ ವರ್ಷಗಳಿಂದ ಬಾಡಿಗೆ ನೆಲೆಯಲ್ಲಿದ್ದವರು ಬರಿಗೈಯಲ್ಲಿ ತೆರವುಗೊಳಿಸಬೇಕಾಗಿದೆ.

-ಕಾಸರಗೋಡು ಹೊಸ ಬಸ್‌ ನಿಲ್ದಾಣ ಸಮೀಪದಿಂದ ಮಿಲನ್‌ ಮೈದಾನದ ತನಕ 1.6 ಕಿ.ಮೀ. ಉದ್ದದ ಮೇಲ್ಸೇತುವೆ
-ಕುಂಬಳೆ, ಮೊಗ್ರಾಲ್‌, ಶಿರಿಯ ಮತ್ತು ಉಪ್ಪಳ ಹೊಳೆಗಳಿಗೆ ನೂತನ ಸೇತುವೆ; ಮಣ್ಣು ಪರೀಕ್ಷೆ ಈಗಾಗಲೇ ನಡೆದಿದೆ
-ದಿನಕ್ಕೆ 10 ಕಿ.ಮೀ. ವೇಗದಲ್ಲಿ ಸಂಚಾರಕ್ಕೆ ತಡೆಯಾಗದಂತೆ ರಸ್ತೆ ನಿರ್ಮಾಣಗೊಳ್ಳಲಿದೆ

Advertisement

Udayavani is now on Telegram. Click here to join our channel and stay updated with the latest news.

Next