Advertisement

ಎಸಿಪಿಗಳ ಸಹಿತ 29 ಪೊಲೀಸರಿಂದ ಸಾಕ್ಷ್ಯ

01:19 AM Mar 05, 2020 | mahesh |

ಮಂಗಳೂರು: ಗೋಲಿಬಾರ್‌ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟೀರಿಯಲ್‌ ವಿಚಾರಣೆ ಬುಧವಾರ ಎಸಿ ಕೋರ್ಟ್‌ನಲ್ಲಿ ನಡೆದಿದ್ದು, ಎಸಿಪಿಗಳಾದ ಕೋದಂಡರಾಮ, ಬೆಳ್ಳಿಯಪ್ಪ ಸಹಿತ 29 ಪೊಲೀಸರು ಸಾಕ್ಷ್ಯ ನುಡಿದರು.

Advertisement

ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್‌ ತನಿಖಾಧಿಕಾರಿ ಜಗದೀಶ್‌ ವಿಚಾರಣೆ ನಡೆಸಿದರು. ಪೊಲೀಸರ ಪರವಾಗಿ ಒಟ್ಟು 176 ಮಂದಿ ಸಾಕ್ಷಿ ನುಡಿಯಬೇಕಿದ್ದು ಇನ್ನೂ 147 ಮಂದಿ ಹಾಜರಾಗಲು ಬಾಕಿ ಇದ್ದಾರೆ. ಮಾ. 9ರಂದು ಡಿಸಿಪಿ ಅರುಣಾಂಶುಗಿರಿ ಸಹಿತ 41 ಮಂದಿ ಪೊಲೀಸರು ಹಾಗೂ ಮಾ. 12ರಂದು ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಸಹಿತ 41 ಜನ ಪೊಲೀಸರು ವಿಚಾರಣೆಗೆ ಹಾಜ ರಾಗುವಂತೆ ಸೂಚನೆ ನೀಡಲಾಗಿದೆ.

ಮಾ. 23ರಂದು ವರದಿ ಮಾ. 23ರಂದು ತನಿಖೆಯ ವರದಿ ಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯ ಹೇಳಲು ಸಿದ್ಧರಿ ರುವ ಪೊಲೀಸ್‌ ಇಲಾಖೆಯ 176  ಮಂದಿಯ ವಿಚಾರಣೆ ನಡೆಸಿ ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು. ಕಾರಣಾಂತರದಿಂದ ಆ ದಿನದೊಳಗೆ ವರದಿ ಸಲ್ಲಿಸಲಾಗದಿದ್ದರೆ ಅವಧಿ ವಿಸ್ತರಿಸಲು ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿ ಜಗದೀಶ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next