Advertisement

ಸ್ವಯಂ ನಿಯಂತ್ರಣದಿಂದ ಕೋವಿಡ್ -19 ಹರಡದಂತೆ ನೋಡಿಕೊಳ್ಳಿ: ಯು.ಟಿ ಖಾದರ್

03:10 PM Mar 18, 2020 | Naveen |

ಮಂಗಳೂರು: ಕೋವಿಡ್ -19  ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಜನ ಸಾಮಾನ್ಯರು ಇದಕ್ಕೆ ಸಹಕಾರ ನೀಡಬೇಕು. ಸ್ವಯಂ ನಿಯಂತ್ರಣದಿಂದ ಹರಡದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

Advertisement

ಕೋವಿಡ್ -19 ಆತಂಕ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರೋಗ ನಿರೋಧಕ ಶಕ್ತಿ ಇದ್ದವರಿಗೆ ಇದು ಅಷ್ಟು ಸುಲಭವಾಗಿ ಬರೋದಿಲ್ಲ. ಅದಕ್ಕಾಗಿ ಪ್ರಕೃತಿಯಲ್ಲಿ ಸಿಗುವ ಆಹಾರ ಸೇವಿಸಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತ ಇನ್ನಷ್ಟು ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕ ಬಸ್‌ನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಯಬೇಕು. ಕೆಎಸ್‌ಆರ್‌ಟಿಸಿ
ಬಸ್‌ನಲ್ಲಿ ಬರುವವರನ್ನು ತಪಾಸಣೆ ಮಾಡಬೇಕು. ಗಡಿಭಾಗ ತಲಪಾಡಿಯಿಂದ ಸೋಂಕಿತರು ಬಾರದಂತೆ ತಡೆಯಬೇಕು. ಹಾಗಾಗಿ ತಲಪಾಡಿ, ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಬೇಕು. ಎಲ್ಲ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಿತ ತಪಾಸಣೆ ಮಾಡಬೇಕು ಎಂದರು.

ವೈರಸ್‌ನ್ನು ಅಷ್ಟು ಸುಲಭವಾಗಿ ತಡೆಯಲು ಸಾಧ್ಯವಿಲ್ಲ, ಹಾಗಾಗಿ ನಾವೇ ಅದರ ಬಗ್ಗೆ ಜಾಗ್ರತೆ ವಹಿಸಬೇಕು. ವಿಶೇಷ ವಾರ್ಡ್ ಗಳನ್ನು ಪ್ರತೇಕ ಕಟ್ಟಡದಲ್ಲಿ ನಿರ್ಮಾಣ  ಮಾಡಬೇಕು. ದುಡಿಯುವ ವರ್ಗಕ್ಕೆ ಸಮಸ್ಯೆ ನಿಜ, ಹಾಗಾಗಿ ತಿಂಗಳ ಬಾಡಿಗೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಸರಕಾರ ಕೂಡ ದುಡಿಯುವ ವರ್ಗದ ಬಗ್ಗೆ ಕಾಳಜಿ ವಹಿಸಿ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next