Advertisement
ಕಳೆದ ವಾರ ಪ್ರತೀ ದಿನ ಸರಾಸರಿ 15ರಿಂದ 20 ಕೋವಿಡ್ ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ ನಾಲ್ಕೆ çದು ದಿನಗಳಿಂದ ಪ್ರಕರಣ ದಿಢೀರ್ ಏರಿಕೆ ಕಂಡಿದೆ. ದ.ಕ.ದಲ್ಲಿ ಸೋಮವಾರವೂ 52 ಮಂದಿಗೆ ಕೊರೊನಾ ದೃಢಪಟ್ಟಿದೆ. 9 ಮಂದಿ ಗುಣಮಿಖರಾಗಿದ್ದಾರೆ. ಯಾವುದೇ ಸಾವಿನ ವರದಿಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ 274 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ. 0.82ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ.
ಉಡುಪಿ: ಜಿಲ್ಲೆಯಲ್ಲಿ ಸೋಮವಾರ 43 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 9 ಮಂದಿ ಗುಣಮುಖ
ರಾಗಿದ್ದಾರೆ. 220 ಪ್ರಕರಣಗಳು ಸಕ್ರಿಯವಾಗಿವೆ.
Related Articles
ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 43 ಮಂದಿಗೆ ಕೊರೊನಾ ದೃಢಪಟ್ಟಿದೆ. 33 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 331 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಸಾವಿಗೀಡಾದವರ ಸಂಖ್ಯೆ 840. ಇದು ವರೆಗೆ 143832 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 142229 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
Advertisement
ಇದನ್ನೂ ಓದಿ:ಓಮಿಕ್ರಾನ್ ಉಲ್ಬಣದ ಹಿನ್ನೆಲೆ: ಅಂಗನವಾಡಿ ಬಂದ್ ಮಾಡಲ್ಲ: ಆಚಾರ್
ಕೇರಳದಲ್ಲಿ 2,560 ಪ್ರಕರಣಕೇರಳದಲ್ಲಿ ಸೋಮವಾರ 2,560 ಮಂದಿಗೆ ಕೊರೊನಾ ದೃಢಪಟ್ಟಿದೆ. 2,150 ಮಂದಿ ಗುಣಮುಖ ರಾಗಿದ್ದಾರೆ. 30 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 48,184ಕ್ಕೇರಿದೆ. 19,359 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಗು: 9 ಮಂದಿಗೆ ಸೋಂಕು
ಮಡಿಕೇರಿ: ಕೊಡಗಿನಲ್ಲಿ ಸೋಮವಾರ 9 ಪ್ರಕರಣ ಗಳು ದೃಢಪಟ್ಟಿವೆ. 28 ಮಂದಿ ಗುಣಮುಖರಾಗಿ ದ್ದಾರೆ. 176 ಸಕ್ರಿಯ ಪ್ರಕರಣಗಳಿವೆ. 37 ಕಂಟೈನ್‌ಮೆಂಟ್ ವಲಯಗಳಿವೆ. ಪಾಸಿಟಿವಿಟಿ ದರ ಶೇ. 3.89 ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಾಸರಗೋಡಿಗೂ ಬಂತು ಒಮಿಕ್ರಾನ್
ಕಾಸರಗೋಡು: ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಮೊದಲ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮಧೂರು ಪಂಚಾಯತ್ ವ್ಯಾಪ್ತಿಯ ವ್ಯಕ್ತಿಯೊಬ್ಬರಿಗೆ ಒಮಿಕ್ರಾನ್ ದೃಢಪಟ್ಟಿದೆ. ಅವರು ಡಿ. 30ರಂದು ಕೊಲ್ಲಿಯಿಂದ ಬಂದಿದ್ದು, ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ. ಜ. 2ರಂದು ಕೇರಳದಲ್ಲಿ 45 ಮಂದಿಗೆ ಒಮಿಕ್ರಾನ್ ದೃಢಪಟ್ಟಿತ್ತು. ಇದುವರೆಗೆ ರಾಜ್ಯದಲ್ಲಿ 152 ಮಂದಿಗೆ ಒಮಿಕ್ರಾನ್ ಬಾಧಿಸಿದೆ.