ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಮಸ್ಟರಿಂಗ್ ಕಾರ್ಯಕ್ಕೆ ನಗರದ ರೋಜಾರಿಯೋ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಸುಮಾರು 2,200 ಕ್ಕೂ ಹೆಚ್ಚು ಸಿಬ್ಬಂಧಿಗಳಿಗೆ ಚುನಾವಣೆಗೆ ಬೇಕಾದ ಚುನಾವಣಾ ಮಂತ್ರ ಯಂತ್ರ ಮತ್ತು ಅದಕ್ಕೆ ಬೇಕಾದ ಸಾಮಾಗ್ರಿ ವಿತರಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಚುನಾವಣೆಯ ಸಿಬ್ಬಂದಿಗಳಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದ್ದು, ಊಟದ ಬಳಿಕ ಸಿಬ್ಬಂದಿಗಳನ್ನು ಬೇರೆ ಬೇರೆ ಕಡೆಯ 448 ಬೂತ್‌ಗಳಿಗೆ ಬಸ್ ವ್ಯವಸ್ಥೆಯ ಮೂಲಕ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಪಾಲಿಕೆ ಚುನಾವಣಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ತಿಳಿಸಿದ್ದಾರೆ.