Advertisement
ಟಿಕೆಟ್‌ಗಾಗಿ ಬರುವವರು ತಮ್ಮ ವಾಹನವನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಟಿಕೆಟ್ ಕೇಂದ್ರಕ್ಕೆ ನಡೆದು ಹೋಗಬೇಕು, ಅಲ್ಲಿಂದ ಮತ್ತೆ ನಡೆದುಕೊಂಡು ರೈಲು ನಿಲ್ದಾಣದೊಳಗೆ ಬರುವಷ್ಟರಲ್ಲಿ ರೈಲು ಇರುತ್ತದೋ ಹೋಗಿರುತ್ತದೋ ಹೇಳಲಾಗದು.
Related Articles
ವಾಸ್ತವವಾಗಿ ಲೋಕಲ್ ಟಿಕೆಟ್ ಪಡೆಯುವುದು ಕೌಂಟರ್‌ನಲ್ಲಿ ಸುಲಭ. ಯಾಕೆಂದರೆ ಅಲ್ಲಿರುವ ಕಂಪ್ಯೂಟರ್‌ನಲ್ಲಿ ತುಂಬಬೇಕಾದ ಆಯ್ಕೆಗಳು ಕಡಿಮೆ. ಅದೇ ಸ್ವಯಂಚಾಲಿತ ಟಿಕೆಟ್ ಮೆಷಿನ್‌ನಲ್ಲಿ ಆಯ್ಕೆ ಹೆಚ್ಚಾದ್ದರಿಂದ ಸಮಯ ದುಪ್ಪಟ್ಟು ಬೇಕು.
Advertisement
ಕಣ್ಣೆದುರು ರೈಲು ಇಲ್ಲ ಎನ್ನುವ ಕಾರಣಕ್ಕೆ ದೂರ ಇರುವ ಕೌಂಟರ್‌ಗೆ ಪ್ರಯಾಣಿಕರು ಹೋಗಲು ಬಯಸುವುದಿಲ್ಲ. 2 ವರ್ಷದ ಹಿಂದೆ ಹೊಸ ಕಟ್ಟಡಕ್ಕೆ ಕೌಂಟರ್ ಸ್ಥಳಾಂತರಿ ಸಲಾಗಿದ್ದರೂ ಕೋವಿಡ್ ಕಾರಣದಿಂದ ಅದರಲ್ಲಿ ಲೋಕಲ್ ಟಿಕೆಟ್ ಕೇಂದ್ರ ಕಾರ್ಯಾಚರಿಸಿದ್ದು ಕಡಿಮೆ. ಕಳೆದ 3 ತಿಂಗಳಿಂದ ಲೋಕಲ್ ಅನ್‌ರಿಸವ್xì ಟ್ರೈನ್‌ಗಳು ಸಂಚರಿಸುತ್ತಿವೆ. ಹಾಗಾಗಿ ಈ ಸಮಸ್ಯೆ ಈಗ ಗಂಭೀರತೆ ಪಡೆದುಕೊಳ್ಳುತ್ತಿದೆ.
ಖಾಯಂ ಕೇಂದ್ರವೀಗ ದೂರವಾಗಿದ್ದರೆ ಪ್ರವೇಶದ್ವಾರದಲ್ಲಿರುವ ಮೆಷಿನೇ ಮುಖ್ಯ ಕೇಂದ್ರವಾಗಿ ಮಾರ್ಪಾಡಾಗಿದೆ.
ಹಿಂದೆ ಸೆಂಟ್ರಲ್‌ನಲ್ಲಿ 3 ಅಟೊಮೇಟೆಡ್ ಮೆಷಿನ್‌ಗಳು ಕಾರ್ಯವೆಸಗುತ್ತಿದ್ದವು. ಈಗ ಒಂದು ಮಾತ್ರ ಸರಿಯಿದೆ. ಅದನ್ನು ಪೀಕ್ ಅವರ್‌ನಲ್ಲಿ ನಿರ್ವಹಿಸಲು ಒಬ್ಬ ನಿವೃತ್ತ ರೈಲ್ವೇ ಸಿಬಂದಿಗೆ ಹೊಣೆ ವಹಿಸಲಾಗಿದೆ. ಅವರು ತನ್ನ 10 ಸಾವಿರ ರೂ. ರಿಚಾರ್ಜ್ ಆಗಿರುವ ಟೋಕನ್ ಬಳಕೆ ಮಾಡಿಕೊಂಡು ಟಿಕೆಟ್ ನೀಡುತ್ತಾರೆ. ಆ ಮೊತ್ತ ಮುಗಿದ ಕೂಡಲೇ ದೂರ ಇರುವ ಕೌಂಟರ್‌ಗೆ ತೆರಳಿ ಮತ್ತೆ ರಿಚಾರ್ಜ್ ಮಾಡಿಕೊಂಡು ಬರಬೇಕಾಗುತ್ತದೆ. ಈ ಪ್ರಕ್ರಿಯೆ ಆಗುವಾಗ ಜನ ನಿಂತೇ ಇರಬೇಕಾಗುತ್ತದೆ. ಅನೇಕ ಬಾರಿ ಆತ ಟೋಕನ್ ರಿಚಾರ್ಜ್ ಮಾಡಿ ಬರುವಾಗ ರೈಲುಗಳು ಹೊರಟು ಹೋಗಿದ್ದೂ ಇದೆ ಎಂದು ಸ್ಥಳೀಯ ಟ್ಯಾಕ್ಸಿ ಚಾಲಕ ನಾಗಪ್ಪ ತಿಳಿಸುತ್ತಾರೆ.
ಮೂರು ಸ್ವಯಂಚಾಲಿತ ಟಿಕೆಟ್ ಯಂತ್ರಗಳಿದ್ದವು. ಪ್ರಸ್ತುತ ಒಂದೇ ಇರುವುದರಿಂದ ಹಾಗೂ ಜನರೆಲ್ಲರೂ ಸೆಂಟ್ರಲ್ ಸ್ಟೇಶನ್ ಕಟ್ಟಡಕ್ಕೇ ಟಿಕೆಟ್‌ಗಾಗಿ ಬರುವುದರಿಂದ ಕೆಲವೊಮ್ಮೆ ಸಾಲು ದೊಡ್ಡದಾಗುತ್ತದೆ. ಹೊಸ ಮಷಿನ್ ಖರೀದಿಸುವುದಕ್ಕೆ ಮುಖ್ಯ ಕಚೇರಿಗೆ ಈಗಾಗಲೇ ಕೋರಲಾಗಿದೆ.– ಕಿಶನ್ ಬಂಗೇರ, ಡೆಪ್ಯುಟಿ ಸ್ಟೇಶನ್ ಮ್ಯಾನೇಜರ್
ಕಮರ್ಷಿಯಲ್ ಮಂಗಳೂರು ಸೆಂಟ್ರಲ್