Advertisement
ಈಗಾಗಲೇ ರೈಲು ಮಾರ್ಗದ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಎರಡನೇ ಹಂತದಲ್ಲಿ ಕೆಳ ಭಾಗದಲ್ಲಿ ಬಂಡೆಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಮಂಗಳವಾರ ಲೋಡೆಡ್ ಗೂಡ್ಸ್ ರೈಲನ್ನು ಓಡಿಸಲಾಗಿದೆ. ರೈಲು ಮಾರ್ಗದ ದುರಸ್ತಿ ಕಾರ್ಯ ಆ. 20ರ ವರೆಗೆ ಮುಂದುವರಿಯಲಿದ್ದು, ಈ ನಡುವೆ ಅದಕ್ಕೂ ಮೊದಲು ರೈಲು ಮಾರ್ಗದ ದುರಸ್ತಿ ಕೆಲಸದಲ್ಲಿನ ಸುರಕ್ಷತೆ ಹಾಗೂ ಪ್ರಯಾಣಿಕ ರೈಲು ಸಂಚಾರಕ್ಕೆ ಯೋಗ್ಯವಾಗಿ ಸಿದ್ಧವಾಗಿದೆಯೇ ಎಂಬುದನ್ನು ಪರೀಕ್ಷಿಸಿ ಬಳಿಕ ಪ್ರಯಾಣಿಕ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಆ. 8ರಂದು ಅಥವಾ ಆ.10ರ ಬಳಿಕ ಪ್ರಯಾಣಿಕ ರೈಲು ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಮೂಲಗಳು ತಿಳಿಸಿವೆ. ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸದಾ ಪ್ರಯಾಣಿಕರ ದಟ್ಟಣೆಯಿಂದ ತುಂಬಿರುತ್ತಿದ್ದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಇದೀಗ ಬಿಕೋ ಎನ್ನುತ್ತಿದೆ.