Advertisement

ಹೊಸ ತಾಲೂಕು ರಚನೆ ಮಂಗಳೂರು ಎಪಿಎಂಸಿಗೆ ಹೊಡೆತ?

11:39 AM Jul 24, 2022 | Team Udayavani |

ಸುರತ್ಕಲ್‌: ಮೂಲ್ಕಿ, ಮೂಡುಬಿದಿರೆ ಹೊಸ ತಾಲೂಕು ರಚನೆಯಾಗಿದ್ದು, ಇದೀಗ ಮಂಗಳೂರು ಕೃಷಿ ಉತ್ಪನ್ನ ಮಾರಾಟ ಕೇಂದ್ರ ದುರ್ಬಲವಾಗುವ ಸಾಧ್ಯತೆ ತಲೆ ದೋರಿದೆ.

Advertisement

ಇದುವರೆಗೆ ಮೂಲ್ಕಿ ಮೂಡುಬಿದಿರೆ ಮಂಗಳೂರಿಗೆ ಸೇರಿದ್ದರಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮುನ್ನ ಉತ್ತಮ ಆದಾಯವನ್ನೂ ಹೊಂದಿತ್ತು. ಆದರೆ ಇದೀಗ ಬಹುತೇಕ ಕೃಷಿ ಪ್ರದೇಶ ಮೂಲ್ಕಿ, ಮೂಡುಬಿದಿ ರೆ ವ್ಯಾಪ್ತಿಯಲ್ಲಿದೆ. ಮಂಗಳೂರು ನಗರವಾಗಿ ಬೆಳೆದಿ ರುವುದರಿಂದ ಸ್ವಲ್ಪ ಮಟ್ಟಿಗೆ ನೀರುಮಾರ್ಗ, ಗುರು ಹೋಬಳಿ, ಬಜಪೆ ಪ್ರದೇಶದಲ್ಲಿ ಕೆಲವು ಭಾಗ ಮಾತ್ರ ಮಂಗ ಳೂರು ತಾಲೂ ಕಿ ನಲ್ಲಿ ಉಳಿಯುತ್ತದೆ. ಹೊಸ ತಾಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ನೂತನ ಎಪಿಎಂಸಿ ರಚನೆ ಪ್ರಕ್ರಿಯೆಯೂ ನಡೆದಿಲ್ಲ.

ಚುನಾವಣೆ ವಿಳಂಬ

ಕೃಷಿ ಉತ್ಪನ್ನ ಸಹಕಾರ ಸಮಿತಿಗಳ ಚುನಾವಣೆಗೆ ಅಧಿಸೂಚನೆ ಶೀಘ್ರವೇ ಪ್ರಕಟಿಸುವ ನಿರೀಕ್ಷೆಯಿತ್ತಾದರೂ ಇದೀಗ ಹುಸಿಯಾಗಿದ್ದು, ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಪೈಪೋಟಿಯಿದ್ದು, ಇದಕ್ಕೆ ಪೂರಕವಾಗಿ ಎಪಿಎಂಸಿಯಲ್ಲಿ ತನ್ನ ಸ್ಥಾನಗಳನ್ನು ಬಲಪಡಿಸಿಕೊಳ್ಳಲು ಕಾಂಗ್ರೆಸ್‌, ಬಿಜೆಪಿ, ಸ್ಥಳೀಯ ಮಟ್ಟದಲ್ಲಿ ಭರ್ಜರಿ ತಯಾರಿ ನಡೆಸಿತ್ತು.

ಜಿಲ್ಲಾಧಿಕಾರಿಗಳು ಮೀಸಲು ನಿಗದಿ ಪಡಿಸಿದ ಬಳಿಕ ಸರಕಾರಕ್ಕೆ ಕಳುಹಿಸಿದ ಬಳಿಕವೇ ಅಧಿಸೂಚನೆ ಹೊರಬಿದ್ದು ಚುನಾವಣೆ ಘೋಷಣೆಯಾಗುತ್ತದೆ. ಬಹುತೇಕ ಜಿಲ್ಲೆಗಳ ಮತದಾರರ ಪಟ್ಟಿ ಸಹಿತ ಎಲ್ಲ ಚುನಾವಣಾ ಪೂರ್ವ ತಯಾರಿ ಮುಗಿದಿದ್ದರೂ ಚುನಾವಣೆ ನಡೆಯದ ಬಗ್ಗೆ ಮತ್ತೆ ಚುನಾವಣೆ ಎದುರಿಸಲು ಸಜ್ಜಾಗಿದ್ದ ನಿಕಟಪೂರ್ವ ಎಪಿಎಂಸಿ ಸದಸ್ಯರಲ್ಲಿ, ಆಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ.

Advertisement

ಆಡಳಿತ ಯಾವಾಗ ಕೊನೆಗೊಂಡಿತ್ತು?

ಎಪಿಎಂಸಿಯ ಅಧಿಕಾರಾವಧಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಂಡಿತ್ತು. ಆದರೆ ಸರಕಾರವು ಅವರ ಚಟುವಟಿಕೆಗಳ ಮೇಲ್ವಿಚಾರಣೆಗೆ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಇದೀಗ 6 ತಿಂಗಳುಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲ.

ಒಟ್ಟು 18 ಮಂದಿ ಸದಸ್ಯರು ಮಂಗಳೂರು ಎಪಿಎಂಸಿಯ ಆಡಳಿತ ಮಂಡಳಿಯಲ್ಲಿರುತ್ತಾರೆ. 11 ಸದಸ್ಯರು ರೈತರಿಂದ ಚುನಾಯಿತರಾಗಲು ಸರಕಾರ ಮೀಸಲಾತಿಯನ್ನು ಘೋಷಿಸಬೇಕಿದೆ. ತೋಟಗಾರಿಕೆ, ವ್ಯಾಪಾರಿಗಳು ಮತ್ತು ತಾಲೂಕು ಕೃಷಿ ಉತ್ಪನ್ನ ಸಹಕಾರ ಸಂಘಗಳಿಂದ ತಲಾ ಒಬ್ಬರು ಆಯ್ಕೆಯಾಗುತ್ತಾರೆ. ಸರಕಾರವು ಮೂರು ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ಎಪಿಎಂಸಿಯ ಒಬ್ಬರು ಅಧಿಕಾರಿ ಸದಸ್ಯರಾಗಿ ಇರುತ್ತಾರೆ.

ಸೂಕ್ತ ಕ್ರಮ ಕೈಗೊಳ್ಳಲಿದೆ: ರಾಜ್ಯದಲ್ಲಿ ಹೊಸ ತಾಲೂಕು ರಚನೆಯಾಗಿದ್ದು, ಆಯಾ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ರಚನೆಯಾಗಬೇಕಿದೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡ ಬಳಿಕ ನಿರ್ಧಾರವಾಗಲಿದೆ. – ಡಾ| ಭರತ್‌ ಶೆಟ್ಟಿ ವೈ., ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next