ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಮಡುತ್ತಿದ್ದುದನ್ನು ಕಸ್ಟಮ್ಸ್ ಇಲಾಖೆ ಪತ್ತೆ ಮಾಡಿದ್ದು, ಒಟ್ಟು 43. 69 ಲ. ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದೆ.
ದುಬಾೖನಿಂದ ಬಂದಿಳಿದ ಪ್ರಯಾಣಿಕನನ್ನು ತಪಾಸಣೆಗೊಳಪಡಿಸಿದಾಗ 3 ಅಂಡಾಕಾರದ ವಸ್ತುಗಳ ರೂಪದಲ್ಲಿ ಹಾಗೂ ಒಂದು ಆಯತಾಕಾರದ ವಸ್ತುವಿನ ಹಾಗೆ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಇರಿಸಲಾಗಿತ್ತು. ಇವುಗಳನ್ನು ಪ್ರಯಾಣಿಕ ತನ್ನ ಗುದಭಾಗದಲ್ಲಿ ಇರಿಸಿ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಆತನಿಂದ 24 ಕ್ಯಾರೆಟ್ ಶುದ್ಧತೆಯ 37,69,800 ರೂ. ಮೌಲ್ಯದ 732 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ 6,00,181 ರೂ. ಮೌಲ್ಯದ 116.540 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನವನ್ನು ನಾಲ್ಕು ತುಂಡುಗಳಾಗಿ ಮಾಡಿ ನೆಸ್ಲೆ ಡೈರಿ ಕ್ರೀಂ ಟಿನ್‌ನ ತಳಭಾಗದಲ್ಲಿ ಅಂಟಿಸಿ ಇರಿಸಿ ಸಾಗಿಸಲಾಗುತ್ತಿತ್ತು.