ಮಂಗಳೂರು: ಮಂಗಳೂರು ವಿಮಾನನಿಲ್ದಾಣದ ಇಂಟಗ್ರೇಟೆಡ್ ಟರ್ಮಿನಲ್ ಕಟ್ಟಡದಲ್ಲಿ ಹೊಸ ಆಗಮನ ಹಾಲ್ ಪ್ರಯಾಣಿಕರ ಉಪಯೋಗಕ್ಕಾಗಿ ನ. 23ರಂದು ಮುಕ್ತಗೊಳಿಸಲಾಯಿತು.
ಹೊಸ ಆಗಮನ ಹಾಲ್‌ಗೆ ಪ್ರಯಾಣಿಕರು ಸುಲಲಿತವಾಗಿ ಪ್ರವೇಶ ಮಾಡುವ ನಿಟ್ಟಿನಲ್ಲಿ ಹೊಸದಾಗಿ ಎರಡು ಎರೋಬ್ರಿಡ್ಜ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಇದಲ್ಲದೆ ವಿಮಾನನಿಲ್ದಾಣ ಆರೋಗ್ಯ ವಿಭಾಗ ಹಾಗೂ ಇಮಿಗ್ರೇಶನ್‌ಗಾಗಿ ಆವಶ್ಯಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಕಸ್ಟಮ್ಸ್ ಇಲಾಖೆಯ ತಪಾಸಣೆಯ ಬಳಿಕ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ನೆಲಅಂತಸ್ತಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಮೊದಲಿನ ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನ ಹಾಲ್‌ನಲ್ಲಿದ್ದ ಕಸ್ಟಮ್ಸ್ ಇಲಾಖೆಯ ವ್ಯವಸ್ಥೆಯನ್ನು ಇಂಟಗ್ರೇಟೆಡ್ ಟರ್ಮಿನಲ್ ಕಟ್ಟಡದಲ್ಲಿ ಸಂಪೂರ್ಣ ಮರು ವ್ಯವಸ್ಥೆಗೊಳಿಸಲಾಗಿದೆ.